ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ: ಮೊದಲೆರಡು ಗಂಟೆಯಲ್ಲಿ ಶೇ 13ರಷ್ಟು ಮತದಾನ

Last Updated 12 ಅಕ್ಟೋಬರ್ 2015, 6:19 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ): ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಬಿರುಸಿನಿಂದ ಸಾಗಿದೆ. ಮೊದಲೆರಡು ಗಂಟೆಗಳಲ್ಲಿ ಶೇಕಡ 13ರಷ್ಟು ಮತದಾರರು ತಮ್ಮ ಹಕ್ಕು ಚುಲಾಯಿಸಿದ್ದಾರೆ.

ಐದು ಹಂತಗಳ ಪೈಕಿ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿರುವ ಎಲ್ಲಾ 49 ಕ್ಷೇತ್ರಗಳಲ್ಲಿ ಶಾಂತಿಯುತ ವಾತಾವರಣ ವರದಿಯಾಗಿದೆ.

‘ಬೆಳಿಗ್ಗೆ 9 ಗಂಟೆಯ ವರೆಗೆ ಶೇ 13ರಷ್ಟು ಮತದಾನವಾಗಿದೆ. ಶಾಂತ ವಾತಾವರಣವಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ’ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಆರ್.ಲಕ್ಷ್ಮಣನ್‌ ಅವರು ತಿಳಿಸಿದ್ದಾರೆ.

ಬಂಕಾದಲ್ಲಿ ಹೆಚ್ಚು ಮತದಾನ: ಮೊದಲೆರಡು ಗಂಟೆಗಳಲ್ಲಿ ಬಂಕಾ ಕ್ಷೇತ್ರದಲ್ಲಿ ಅತಿಹೆಚ್ಚು ಶೇ 14ರಷ್ಟು ಮತದಾನವಾಗಿದೆ. ಸಮಷ್ಟೀಪುರದಲ್ಲಿ ಅತಿ ಕಡಿಮೆ ಶೇ 7ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

10 ಜಿಲ್ಲೆಗಳಲ್ಲಿ ವ್ಯಾಪಿಸಿರುವ 49 ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಒಟ್ಟು 1.35 ಕೋಟಿ ಮತದಾರರು ಹಕ್ಕು ಚಲಾಯಿಸುವ ನಿರೀಕ್ಷೆಗಳಿವೆ. 54 ಮಹಿಳೆಯರು ಸೇರಿದಂತೆ ಒಟ್ಟು 583 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT