ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರಲಿಂಗೇಶ್ವರ ಮಠದ ದಾಖಲೆ ಹಸ್ತಾಂತರ

ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠವಾಗಿ ಘೋಷಣೆ
Last Updated 25 ಅಕ್ಟೋಬರ್ 2014, 6:50 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಗೌರ ಗ್ರಾಮದ ಬೀರಲಿಂಗೇಶ್ವರ ಮಠವನ್ನು ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠವನ್ನಾಗಿಸಲು ಗುರುವಾರ ಹಮ್ಮಿ ಕೊಂಡಿದ್ದ ಸಮಾರಂಭದಲ್ಲಿ ತಿಂಥಿಣಿ ಸಿದ್ಧರಾಮಾನಂದ ಸ್ವಾಮೀಜಿ ಅವರಿಗೆ ದಾಖಲೆಗಳನ್ನು ಹಸ್ತಾಂತರಿ ಸಲಾ ಯಿತು.

ನಂತರ ಮಾತನಾಡಿದ ಸ್ವಾಮೀಜಿ, ಮಠದ ಶ್ರೇಯೋಭಿವೃದ್ಧಿಗಾಗಿ ಶ್ರಮಿ ಸುವುದಾಗಿ ಹೇಳಿದರು. ಕೆಟ್ಟ ಆಚರಣೆ, ಆಲೋಚನೆಗಳಿಂದ ದೂರವಿರಬೇಕು. ಕೆಟ್ಟ ಪದ್ಧತಿ ಅನುಸರಿ ಸಿದರೆ ಜೀವನದಲ್ಲಿ ಸಫಲತೆ ಸಾಧ್ಯವಿಲ್ಲ. ಮಾನವೀಯತೆ ಮೈಗೂಡಿ ಸಿಕೊಳ್ಳಬೇಕು.

ಪ್ರಾಮಾಣಿಕರಾಗಿ ರಬೇಕು. ಅನ್ಯಾಯದ ವಿರುದ್ಧ ಎದೆತಟ್ಟಿ ನಿಲ್ಲಬೇಕು. ದೇವರ ಸ್ಮರಣೆಯಿಂದ ನೆಮ್ಮದಿ ದೊರಕುತ್ತದೆ ಎಂದರು.
ಮುಖಂಡರಾದ ಚಂದ್ರಕಾಂತ ಮೇತ್ರೆ ಮಾತನಾಡಿ, ಸಮಾಜಕ್ಕಾಗಿ ನಿಸ್ವಾರ್ಥ ಭಾವನೆಯಿಂದ ದುಡಿಯ ಬೇಕು. ವಿವಿಧ ಕಾರ್ಯಗಳನ್ನು ಕೈಗೊಂಡರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಮಠಗಳ ಬೆಳವಣಿಗೆಗೂ ಸಹಕರಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತ ಚಿಮಕೋಡ್‌ ಮಾತನಾಡಿ, ಜೀವನದಲ್ಲಿ ಕಷ್ಟ ಮತ್ತು ಸುಖ ಬರುತ್ತವೆ, ಅವೆಲ್ಲವನ್ನು ಸಮನಾಗಿ  ತೆಗೆದುಕೊಳ್ಳಬೇಕು. ಯುವಪೀಳಿ ಗೆಯು ದಾರಿ ತಪ್ಪುತ್ತಿ ರುವುದನ್ನು ತಡೆಯಬೇಕಾಗಿದೆ ಎಂದರು.

ಬೀರಪ್ಪ ಮುತ್ಯಾ ನೇತೃತ್ವ ವಹಿಸಿದ್ದರು. ಶರಣಮ್ಮ ತಾಯಿ, ಪ್ರಮುಖರಾದ ಸುಭಾಷ ರೇಕುಳಗಿ, ಅನಿಲಕುಮಾರ ಗೌರ, ಶರಣಪ್ಪ ಅಣದೂರ, ಶಿವಾಜಿ ಮೇತ್ರೆ, ಶೇಷಪ್ಪ ಗೌರ, ಅನಿಲ ಜ್ಯಾಂತೆ ಇದ್ದರು. ವೀರೇಶ ಸ್ವಾಗತಿಸಿದರು. ಜೀತೇಂದ್ರ ವಂದಿಸಿದರು.
ಇದಕ್ಕೂ ಮೊದಲು ಬೀರಲಿಂಗೇಶ್ವರರ ಪಲ್ಲಕ್ಕಿ ಮೆರವಣಿಗೆ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅನೇಕ ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT