ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಕೆ ಬೇಡ

Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಕನ್ನಡದ ಬಹುಪಾಲು ಟಿ.ವಿ.  ಸುದ್ದಿ ವಾಹಿನಿಗಳಲ್ಲಿ ಹಿಂದಿ ಬಳಕೆ ಹೆಚ್ಚುತ್ತಿದೆ.  ಮಾತುಕತೆಯಲ್ಲಿ ಶೇಕಡ 30ರಷ್ಟು ಹಿಂದಿ ಪದಗಳೇ ಬಳಕೆಯಾಗುತ್ತಿವೆ.

ಉದಾಹರಣೆಗೆ ಖದರ್‌, ಝಲಕ್‌, ಖತರ್‌ನಾಕ್‌, ಜುಗಲ್‌ ಬಂದಿ, ಹವಾ, ಖತಂ ಇತ್ಯಾದಿ ಪದಗಳನ್ನು ಬೆರೆಸಿ ಕನ್ನಡ ನುಡಿಯನ್ನು ಹಾಳು ಮಾಡಲಾಗುತ್ತಿದೆ. ಇದು ಹೀಗೇ ಮುಂದುವರಿದರೆ ಮುಂದೊಂದು ದಿನ ಅಪ್ಪಟ ಕನ್ನಡವೇ ಕಣ್ಮರೆಯಾಗಿ ಬಿಡುವ ಅಪಾಯ ಬಂದೊದಗುವುದರಲ್ಲಿ ಎರಡು ಮಾತಿಲ್ಲ.

ಇತ್ತ ತಮಿಳು ಸುದ್ದಿ ವಾಹಿನಿಗಳ ಮಾತುಕತೆಯಲ್ಲಿ  ಶೇ 98ರಷ್ಟು  ತಮಿಳೇ ಬಳಕೆಯಾಗುತ್ತಿದೆ. ಬೇರೊಂದು ಭಾಷೆಯ ಪದಗಳನ್ನು ಅನಗತ್ಯವಾಗಿ ಬೆರೆಸಿ ಮಾತನಾಡುವುದರಿಂದ ಕೇಳುಗರಿಗೆ ಕಿರಿಕಿರಿ ಆಗುತ್ತದೆ.  ಇದನ್ನು ತಪ್ಪಿಸುವ ಕಡೆ ವಾಹಿನಿಗಳು  ಗಮನ ಹರಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT