ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲಿ ಪ್ರವಾಸ ಚೆಂದ

ಅಕ್ಷರ ಗಾತ್ರ

ಬೇಸಿಗೆ ನನಗೆ ಯಾವಾಗಲೂ ಕಿರಿಕಿರಿ ಅನ್ನಿಸಿದ್ದಿಲ್ಲ. ಬೇರೆ ಋತುಗಳಲ್ಲಿ ಇರುತ್ತಿದ್ದಂತೇ ಈಗಲೂ ಸಮಯ ಕಳೆಯುತ್ತಿದೆ. ಮನಸ್ಥಿತಿಯಲ್ಲಂತೂ ಏನೂ ಬದಲಾವಣೆ ಉಂಟಾಗಿಲ್ಲ. ಚಳಿಗಾಲದಲ್ಲಾದರೆ ನಿಧಾನಕ್ಕೆ ಎದ್ದು ಕೆಲಸಕ್ಕೆ ಹೋಗಬಹುದಿತ್ತು. ಆದರೆ ಈಗ ಹಾಗಲ್ಲ. ಸ್ವಲ್ಪ ಬೇಗನೇ ಎದ್ದು ಕೆಲಸಕ್ಕೆ ಹೋಗಬೇಕು.

ಬೆಳಿಗ್ಗೆ ಐದಕ್ಕೆಲ್ಲ ಎದ್ದು ಚಿತ್ರೀಕರಣಕ್ಕೆ ಹೋಗುತ್ತಿರುತ್ತೇವೆ. ಬೇಗನೆ ಕೆಲಸ ಶುರು ಮಾಡಿದರೆ ಒಂದು ರೀತಿ ಉತ್ಸಾಹ ಇರುತ್ತದೆ. ಉತ್ಸಾಹಕ್ಕೆ ತಕ್ಕಂತೆ ಶ್ರಮವನ್ನೂ ಹಾಕಬಹುದು.

ನನ್ನ ಕಲಾ ನಿರ್ದೇಶನ ವಿಭಾಗದಲ್ಲಿ ಹೇಳುವುದಾದರೆ ನಾವು ರಾತ್ರಿ ಸಂದರ್ಭದಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡುತ್ತೇವೆ. ರಾತ್ರಿ ಅವಧಿಯಲ್ಲಿ ಹೆಚ್ಚಿನ ಉತ್ಸಾಹವೂ ಇರುತ್ತದೆ. ಹಗಲಿನ ಸಂದರ್ಭವನ್ನು ಬೇರೆ ರೀತಿ ಬಳಸಿಕೊಳ್ಳಲು ಅನುವಾಗುತ್ತದೆ.

ಬೇಸಿಗೆಯನ್ನು ಕಳೆಯೋಕೆ ಹೆಸರಾಗಿರುವುದೇ ಕಡಲ ತಡಿಗಳು. ಎಲಿಗಿರಿ, ಯಾಣಕ್ಕೆ ಹೋಗುವುದು, ಕೂರ್ಗ್‌ನಲ್ಲಿ ರಿವರ್ ರ್‍ಯಾಫ್ಟಿಂಗ್ ಮಾಡುವುದು ಇವೆಲ್ಲ ಬಿಸಿಲಿನಲ್ಲಿ ಒಳ್ಳೆ ಅನುಭವಗಳು. ನಾನೂ ನೀರಿರುವ ಪ್ರದೇಶಗಳಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೇನೆ. ಅದರ ಜೊತೆಗೆ ಊಟಿಗೆ ಪ್ರವಾಸ ಹೊರಡುವುದು ಬೇಸಿಗೆಯ ಸುಖ ಅನುಭವಿಸುವ ಇನ್ನೊಂದು ಸರಳ ಮತ್ತು ಸಂತಸದ ಮಾರ್ಗ.

ಇದಕ್ಕೆ ಬೆಂಬಲ ಎಂಬಂತೆ ಕಳೆದ ವಾರ ಬಿಡುಗಡೆಯಾದ ‘ಊಟಿ’ ಚಿತ್ರದ ಹಲವು ಭಾಗಗಳನ್ನು ಊಟಿಯಲ್ಲೇ ಚಿತ್ರೀಕರಿಸಿದ್ದೆವು. ಅದು ಕೂಡ ಬೇಸಿಗೆಯಲ್ಲೇ. ನಂತರ ಅಲ್ಲಿಂದ ಕೇರಳಕ್ಕೆ ಹೋಗಿದ್ದೆವು. ಹಾಗಾಗಿ ‘ಊಟಿ’ ಚಿತ್ರೀಕರಣ ನೆನಪಿನಲ್ಲಿ ಉಳಿಯುವಂಥದ್ದು.

ಈ ತಂಪು ವಾತಾವರಣದಲ್ಲಿ ಅಲ್ಲಿನ ಚಹಾ ತೋಟಗಳ ಆಸುಪಾಸಿನಲ್ಲಿ ಸಮಯ ಕಳೆಯುವ ಅನುಭವ ವಿಶೇಷ. ನಿಮಿಷ ನಿಮಿಷಕ್ಕೂ ವಾತಾವರಣ ಬದಲಾಗುತ್ತಿರುತ್ತದೆ. ಈಗಷ್ಟೇ ಬಿಸಿಲಿದ್ದು ಸೆಖೆ ಅನ್ನಿಸಿದರೆ, ಇನ್ನೆರಡು ನಿಮಿಷಗಳಲ್ಲಿ ಮೋಡ, ಚಳಿಯ ಅನುಭವ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT