ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ನಲ್ಲಿ ಆತ್ಮಾಹುತಿ ದಾಳಿ: 10 ಸಾವು

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕಂದಹಾರ್‌(ಎಎಫ್‌ಪಿ): ದಕ್ಷಿಣ ಆಫ್ಘಾನಿಸ್ತಾನದ ಬ್ಯಾಂಕ್‌ ಒಂದಕ್ಕೆ ನುಗ್ಗಿದ ತಾಲಿಬಾನಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, 15 ಜನ ಗಾಯಗೊಂಡಿದ್ದಾರೆ.

ಉಗ್ರರ ಪ್ರಾಬಲ್ಯವಿರುವ ಹೆಲ್ಮಂಡ್‌ ಪ್ರಾಂತ್ಯದ ರಾಜಧಾನಿ ಲಷ್ಕರ್‌ ಗಾಹ್‌ನ ಕಾಬೂಲ್‌ ಬ್ಯಾಂಕ್‌ ಶಾಖೆಯ ಪ್ರವೇಶ ದ್ವಾರದ ಬಳಿ ಬಾಂಬ್‌ ಸ್ಫೋಟಿಸಿದ ದಾಳಿಕೋರರು ಒಳನುಗ್ಗಿದರು.

‘ದ್ವಾರದ ಬಳಿ ತನ್ನನ್ನು ತಾನು ಸ್ಫೋಟಿಸಿಕೊಂಡ ದಾಳಿಕೋರನೊಬ್ಬ ಉಳಿದ ಉಗ್ರರಿಗೆ ಒಳನುಗ್ಗಲು ಅನುವು ಮಾಡಿಕೊಟ್ಟ’ ಎಂದು ಹೆಲ್ಮಂಡ್‌ನ ಪ್ರಾಂತೀಯ ವಕ್ತಾರ ಒಮರ್‌ ಜ್ವಾಕ್‌ ತಿಳಿಸಿದರು.

‘ಬುಧವಾರ ಸರ್ಕಾರಿ ಉದ್ಯೋಗಿ­ಗಳ ವೇತನದ ದಿನವಾಗಿರುವುದರಿಂದ ಸಂಬಳ ಪಡೆದುಕೊಳ್ಳಲು ಅವರೆಲ್ಲರೂ ಬ್ಯಾಂಕ್‌ಗೆ ಬಂದಿದ್ದರು’ ಎಂದು ತಿಳಿಸಿದರು.

13 ವರ್ಷದಿಂದ ಆಫ್ಘಾನಿಸ್ತಾನ­ದಲ್ಲಿ ನೆಲೆಯೂರಿರುವ ನ್ಯಾಟೊ ಪಡೆಗಳು ಡಿ.31ರಂದು ಅಲ್ಲಿ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಿದೆ. ಆಫ್ಘನ್ ಪೊಲೀಸರು ಮತ್ತು ಸೇನೆ ರಾಷ್ಟ್ರಾದ್ಯಂತ ಭದ್ರತಾ ಕರ್ತವ್ಯವನ್ನು ಕೈಗೆತ್ತಿಕೊಂಡ ಬೆನ್ನಲ್ಲೇ ಈ ಘಟನೆ ನಡೆದಿದೆ ಎಂದು ಹೆಲ್ಮಂಡ್‌ನ ಪೊಲೀಸ್‌ ವಕ್ತಾರ ಫರೀದ್‌ ಅಹ್ಮದ್‌ ಒಬೈದಿ ಹೇಳಿದರು.

ಬ್ಯಾಂಕ್‌ ಶಾಖೆಯೊಳಗೆ ನಾಗರಿಕರು ಸಿಲುಕಿದ್ದಾರೆಯೇ ಎಂಬುದನ್ನು ಖಚಿತ­ಪಡಿಸಲು ಅಧಿಕಾರಿಗಳಿಗೆ ಇದವರೆಗೂ ಸಾಧ್ಯವಾಗಿಲ್ಲ.
ಬ್ಯಾಂಕ್ ಮೇಲಿನ ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವು­ದಾಗಿ ತಾಲಿಬಾನ್‌ ವಕ್ತಾರ ಹೇಳಿಕೆ ನೀಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT