ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ಸೈನಾ ಮೇಲೆ ಭರವಸೆ

ಇಂದಿನಿಂದ ಇಂಡೊನೇಷ್ಯಾ ಓಪನ್
Last Updated 1 ಜೂನ್ 2015, 19:30 IST
ಅಕ್ಷರ ಗಾತ್ರ

ಜಕಾರ್ತ (ಐಎಎನ್ಎಸ್):  ಕಳೆದ ವಾರ ಸಿಡ್ನಿಯಲ್ಲಿ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದ್ದ ಭಾರತದ ಸೈನಾ ನೆಹ್ವಾಲ್ ಮತ್ತು ಕೆ. ಶ್ರೀಕಾಂತ್ ಮಂಗಳವಾರದಿಂದ ಆರಂಭ ವಾಗುವ ಇಂಡೊನೇಷ್ಯಾ ಓಪನ್ ಸೂಪರ್‌ ಸೀರಿಸ್‌ ಪ್ರಶಸ್ತಿ ಗಳಿಸುವ ಛಲದಲ್ಲಿದ್ದಾರೆ.

ಇಲ್ಲಿಯ ಇಸ್ತೊರಾ ಗೆಲೊರಾ ಬಂಗ್  ಕರ್ಣೊ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದೆ.

ಸೈನಾ ನೆಹ್ವಾಲ್ ಅವರು 2009, 2010 ಮತ್ತು 2012ರಲ್ಲಿ ಈ ಟೂರ್ನಿಯಲ್ಲಿ ಜಯಿಸಿದ್ದರು. ವಿಶ್ವ ರ್‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ದಲ್ಲಿರುವ ಸೈನಾ ನೆಹ್ವಾಲ್ ಇಂಡೊನೇಷ್ಯಾ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಎರಡನೇ ಶ್ರೇಯಾಂಕದಲ್ಲಿ ಆಡುವರು.

ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್‌ ನಾಲ್ಕನೇ ಶ್ರೇಯಾಂಕದಲ್ಲಿ ಕಣಕ್ಕಿಳಿಯುವರು. ಭಾರತದ ಪಿ.ವಿ. ಸಿಂಧು, ಪರುಪಳ್ಳಿ ಕಶ್ಯಪ್ ಕೂಡ ಸಿಂಗಲ್ಸ್‌ನಲ್ಲಿ ಭಾಗವಹಿಸುವರು. ಮಹಿಳಾ ಡಬಲ್ಸ್‌ ನಲ್ಲಿ ಜ್ವಾಲಾಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT