ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ ಕರಾವಳಿ ಮೇಲೆ ನಿಗಾ: ಪರಿಕ್ಕರ್‌ ಸೂಚನೆ

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಗುಡಗಾಂವ: ಕರ್ನಾಟಕದ ಭಟ್ಕಳ ಕಡಲ ತೀರದಲ್ಲಿ ಕಳ್ಳ ಸಾಗಣೆ ಮತ್ತು ಉಗ್ರರ ಚಟು­ವ­ಟಿಕೆ ಅವ್ಯಾಹತವಾಗಿ ನಡೆ­ಯುತ್ತಿರುವ ಶಂಕೆ ಇರುವುದರಿಂದ ಇವು­ಗಳ ನಿಯಂತ್ರಣಕ್ಕೆ ಈ ಕಡಲತೀರದ ಮೇಲೆ ತೀವ್ರ ನಿಗಾ ಇಡುವಂತೆ ರಕ್ಷಣಾ ಸಚಿವ ಮನೋಹರ್ ಪರಿ­ಕ್ಕರ್‌, ಭದ್ರತಾ ಪಡೆಗಳಿಗೆ ಸೂಚಿಸಿದ್ದಾರೆ.

ಗುಡಗಾಂವದಲ್ಲಿ ಸ್ಥಾಪಿಸಿರುವ ಭಾರತೀಯ ನೌಕಾದಳದ ರಾಷ್ಟ್ರೀಯ ಸಂವಹನ ಸಮನ್ವಯ, ನಿಯಂತ್ರಣ, ಬೇಹುಗಾರಿಕಾ ಕೇಂದ್ರ­ವನ್ನು ಭಾನು­ವಾರ ಉದ್ಘಾ­ಟಿಸಿ ಅವರು ಮಾತ­ನಾಡಿದರು. ಗೋವಾ–ಬೆಂಗ­ಳೂರು, ಗೋವಾ –ರತ್ನಗಿರಿ ವ್ಯಾಪ್ತಿಯಲ್ಲಿ ರೇಡಾರ್‌ ವ್ಯವಸ್ಥೆ ಇಲ್ಲದಿರುವುದು ಲೋಪವಾಗಿದ್ದು ಇದನ್ನು ಸರಿಪಡಿ­ಸುವುದಾಗಿ ಹೇಳಿದರು.

ಭಾರತೀಯ ಕಡಲತೀರದ ರಕ್ಷಣೆ­ಗಾಗಿ ನೌಕಾದಳ ₨ 450 ಕೋಟಿ ವೆಚ್ಚದಲ್ಲಿ ರೂಪಿಸಿರುವ ಕರಾವಳಿ ಕಣ್ಗಾವಲು ವ್ಯವಸ್ಥೆಯಲ್ಲಿ ಇನ್ನೂ ಅನೇಕ ಲೋಪದೋಷ  ಉಳಿದಿವೆ ಎಂದು  ಪರಿಕ್ಕರ್‌ ಒಪ್ಪಿಕೊಂಡರು. ಕೊರತೆಗಳನ್ನು ಸರಿ­ಪಡಿಸಿ ಕರಾವಳಿ ರಕ್ಷಣಾ ವ್ಯವಸ್ಥೆ­ಯನ್ನು ಸಂಪೂ­ರ್ಣ­ ಬಲಪಡಿ­ಸಲು ಇನ್ನೂ ಕೆಲವು ವರ್ಷ ಬೇಕಾಗಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT