ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತೆ ಕೋರಿ ಪ್ರಧಾನಿಗೆ ಕರುಣಾನಿಧಿ ಪತ್ರ

Last Updated 29 ಜನವರಿ 2014, 9:09 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ತಮ್ಮ ಹಿರಿಯ ಪುತ್ರ ಎಂ.ಕೆ.ಅಳಗಿರಿಯನ್ನು ಅಮಾನತು ಮಾಡಿದ ಹಿನ್ನೆಲೆಯಲ್ಲಿ ಹೊತ್ತಿದ ಕೌಟುಂಬಿಕ ಕಿಚ್ಚಿಗೆ ಬೆಚ್ಚಿರುವ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರು ಬುಧವಾರ ತಮ್ಮ ಕಿರಿಯ ಪುತ್ರ ಸಾಲ್ಟಿನ್ ಅವರಿಗೆ ಹೆಚ್ಚುವರಿ ಭದ್ರತೆ ಒದಗಿಸುವಂತೆ ಕೋರಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಅಳಗಿರಿಯ ಅಮಾನತು ಮಾಡಿದ ಘಟನೆಯ ನಂತರ ಕರುಣಾನಿಧಿ ಅವರು ಸಾಲ್ಟಿನ್ ಅವರ ಭದ್ರತೆಯನ್ನು ಹೆಚ್ಚಿಸುವಂತೆ ಕೋರಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

2006ರಲ್ಲಿ ಮಧುರೈ ರೈಲು ನಿಲ್ದಾಣದಲ್ಲಿ ಸಾಲ್ಟಿನ್ ಅವರ ಮೇಲೆ ನಡೆದ ಹತ್ಯೆಯ ಯತ್ನದ ಘಟನೆಯ ನಂತರ ಅವರಿಗೆ ಸಿಆರ್‌ಪಿಎಫ್ ಕಮಾಂಡೊಗಳ ಭದ್ರತೆ ಒದಗಿಸಲಾಗಿದೆ.

ಸಹೋದರ ಎಂ.ಕೆ. ಸ್ಟಾಲಿನ್‌ ಸಾವಿನ ಕುರಿತು ಅನುಚಿತ ಪದ ‍ಪ್ರಯೋಗಿಸಿ ಮಾತ­ನಾಡಿದ್ದಕ್ಕೆ, ಪಕ್ಷ­ದಲ್ಲಿ ಹೊಂದಿದ ಉತ್ತಮ ಸ್ಥಾನಕ್ಕೆ ಅನು­ಗುಣವಾಗಿ ಕಾರ್ಯನಿರ್ವಹಿಸದೆ ಇರುವುದು ಮತ್ತು ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಮಾಧ್ಯಮಗಳಿಗೆ ಸಂದ­ರ್ಶನ ನೀಡಿರುವ ಕಾರಣಕ್ಕೆ ಅಳಗಿರಿ ಅವ­ರನ್ನು ಪಕ್ಷದಿಂದ ಅಮಾನತು ಮಾಡ­­ಲಾಯಿತು ಕರುಣಾನಿಧಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT