ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ ಮತದಾನ: ಸಾರ್ವಕಾಲಿಕ ದಾಖಲೆ

16ನೇ ಮಹಾಚುನಾವಣೆ ಅಂತ್ಯ
Last Updated 12 ಮೇ 2014, 20:03 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಮೂರು ರಾಜ್ಯಗಳಲ್ಲಿ ಸೋಮವಾರ ನಡೆದ ಕೊನೆಯ ಹಂತದ ಮತದಾನ­ದೊಂ­ದಿಗೆ ಮಹಾ­ಚುನಾ­ವಣೆ ಅಂತ್ಯ­ಗೊಂಡಿದೆ.  ಈ ಬಾರಿ ಶೇ 66.38ರಷ್ಟು ಭರ್ಜರಿ ಮತದಾನವಾಗಿರುವುದು ಲೋಕ­ಸಭೆ ಚುನಾವಣೆಯ ಇತಿಹಾಸ­ದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.

1984ರಲ್ಲಿ ನಡೆದ ಚುನಾವಣೆ­ಯಲ್ಲಿ ಶೇ 64.01ರಷ್ಟು ಮತದಾನ­ವಾಗಿತ್ತು. 2009ರಲ್ಲಿ ಈ ಪ್ರಮಾಣ ಶೇ 58.19ರಷ್ಟು ಇತ್ತು.
ಉತ್ತರಪ್ರದೇಶ (18 ಕ್ಷೇತ್ರ) ಪಶ್ಚಿಮ ಬಂಗಾಳ (17) ಹಾಗೂ ಬಿಹಾರ (6) ರಾಜ್ಯ­ಗಳ ಶೇ 60ರಷ್ಟು ಮತದಾರರು ಕೊನೆಯ ಹಂತದ

ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಎಲ್ಲ ಹಂತಗಳೂ ಸೇರಿ  50 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌,  ಕಾಂಗ್ರೆ­ಸ್‌ನ ಅಜಯ್‌  ರಾಯ್‌ ಅಖಾ­ಡ­ಕ್ಕಿಳಿದ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರ  ಅಂತಿಮ ಹಂತದ ಮತದಾನ­ದಲ್ಲಿ  ಇಡೀ ದೇಶದ ಗಮನ ಸೆಳೆದಿತ್ತು. 

ಪಶ್ಚಿಮಬಂಗಾಳದಲ್ಲಿ ಸಿಪಿಎಂ ಹಾಗೂ ತೃಣಮೂಲ ಕಾಂಗ್ರೆಸ್‌ ಕಾರ್ಯ­­­ಕರ್ತರ ಮಧ್ಯೆ ನಡೆದ ಮಾರಾ­ಮಾರಿ ಬಿಟ್ಟರೆ, ಬಹುತೇಕ ಶಾಂತಿಯುತ ಮತ­ದಾನ ನಡೆಯಿತು. ಮೋದಿ ಅವರು ವಿಡಿಯೊ ಸಂದೇಶ ಬಿಡು­ಗಡೆ ಮಾಡಿದ್ದು ಹಾಗೂ ಅಜಯ್‌ ರಾಯ್‌ ತಮ್ಮ ಕುರ್ತಾದ ಮೇಲೆ ಪಕ್ಷದ ಚಿನ್ಹೆಯನ್ನು ಅಂಟಿಸಿ­ಕೊಂಡಿದ್ದು ವಿವಾದಕ್ಕೆ ಕಾರಣವಾಯಿತು.

ಪಶ್ಚಿಮಬಂಗಾಳದಲ್ಲಿ ಶೇ 79.96 ರಷ್ಟು, ಬಿಹಾರ­ದಲ್ಲಿ ಶೇ 58 ಹಾಗೂ ಉ.ಪ್ರದೇಶ­ದಲ್ಲಿ ಶೇ 55.29ರಷ್ಟು ಮತದಾನವಾಗಿದೆ.
ಪ್ರತಿಷ್ಠಿತ ವಾರಾಣಸಿ ಕ್ಷೇತ್ರದಲ್ಲಿ ಶೇ 55.34ರಷ್ಟು ಮತದಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT