ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಪ್ರತಿ ನಿತ್ಯ 1300 ಕ್ಯಾನ್ಸರ್‌ ರೋಗಿಗಳ ಸಾವು

Last Updated 17 ಮೇ 2015, 10:42 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದಲ್ಲಿ ಪ್ರತಿ ನಿತ್ಯ 1300 ಜನರು ಕ್ಯಾನ್ಸರ್‌ ರೋಗಕ್ಕೆ ಬಲಿಯಾಗುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌)ತಿಳಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ದೇಶವ್ಯಾಪಿ ನಡೆಸಿದ ಸಮಿಕ್ಷೆಯಿಂದ ಈ ಅಂಶ ದೃಢಪಟ್ಟಿದ್ದು, ತಂಬಾಕು ಸೇವನೆಯಿಂದ ಅತಿ ಹೆಚ್ಚು ಸಾವುಗಳು ಸಂಭವಿಸುತ್ತಿವೆ ಎಂದು ಸಮೀಕ್ಷೆ ವರದಿ ತಿಳಿಸಿದೆ.

2012 ರಿಂದ 2014ರವರೆಗೆ ನಡೆದ  ಸಂಶೋಧನೆಯಿಂದ ಈ ಅಂಶ ದೃಢಪಟ್ಟಿದ್ದು ಪ್ರತಿ ವರ್ಷ ಶೇ.6ರಷ್ಟು ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಐಸಿಎಂಆರ್‌ ತಿಳಿಸಿದೆ.

2014ರಲ್ಲಿ 28,20,179ಕ್ಯಾನ್ಸರ್‌ ಪ್ರಕರಣಗಳು ದಾಖಲಾಗಿದ್ದು, ಒಟ್ಟು 4,91,598 ಜನರು ಸಾವನ್ನಪ್ಪಿದ್ದರು. 2013ರಲ್ಲಿ 4,78,180 ಹಾಗೂ 2012ರಲ್ಲಿ 4,65,169 ಜನರು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು.

ಬದಲಾದ ಜೀವನ ಶೈಲಿ, ತಂಬಾಕು ಸೇವನೆ, ಅತಿಯಾದ ಒತ್ತಡ, ಡಯಟ್‌, ಪೌಷ್ಠಿಕ ಆಹಾರದ ಕೊರತೆ ಸೇರಿದಂತೆ ಹಲವಾರು ಕಾರಣಗಳಿಂದ ಕ್ಯಾನ್ಸರ್‌ ರೋಗ ಹರಡುತ್ತಿದೆ ಎಂದು ವೈದ್ಯಕೀಯ ಸಂಶೋಧನಾ ಮಂಡಳಿ ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT