ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ 12ನೇ ದೊಡ್ಡ ರಾಜ್ಯ

Last Updated 2 ಜೂನ್ 2014, 19:30 IST
ಅಕ್ಷರ ಗಾತ್ರ

ನೂತನ ರಾಜ್ಯವಾಗಿ ಉದಯವಾದ ತೆಲಂಗಾಣ, ಜನಸಂಖ್ಯೆ ಮತ್ತು ವಿಸ್ತಾ­ರದ ಎರಡೂ ದೃಷ್ಟಿಯಿಂದ ದೇಶದ 12ನೇ ದೊಡ್ಡ ರಾಜ್ಯ ಎನಿಸಿದೆ.

ರಾಜ್ಯದ ವಿಶೇಷತೆ: ಸ್ಥಳ: ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವೆ ತೆಲಂಗಾಣ ಹರಡಿಕೊಂಡಿದೆ. ನೆರೆ ರಾಜ್ಯಗಳು: ದಕ್ಷಿಣ ಮತ್ತು ಪೂರ್ವ ಭಾಗಕ್ಕೆ ಆಂಧ್ರಪ್ರದೇಶ, ಉತ್ತರ ಮತ್ತು ವಾಯವ್ಯ ಭಾಗಕ್ಕೆ ಮಹಾ­ರಾಷ್ಟ್ರ, ಪಶ್ಚಿಮಕ್ಕೆ ಕರ್ನಾಟಕ ಹಾಗೂ ಈಶಾನ್ಯಕ್ಕೆ ಛತ್ತೀಸಗಡ ಮತ್ತು ಒಡಿಶಾ ರಾಜ್ಯಗಳು ತೆಲಂಗಾಣದ ಗಡಿಯನ್ನು ಹಂಚಿಕೊಂಡಿವೆ.

ಜನಸಂಖ್ಯೆ: ಸುಮಾರು 3.5 ಕೋಟಿ: ಪ್ರದೇಶ: ತೆಲಂಗಾಣ  1,14,840 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಇದು ಇಂಗ್ಲೆಂಡ್ನ ವಿಸ್ತೀರ್ಣಕ್ಕೆ ಸಮವಾಗಿದೆ.

ಶಾಸಕಾಂಗ: ವಿಧಾನ­ಸಭೆಯಲ್ಲಿ 119  ಮತ್ತು ವಿಧಾನ ಪರಿಷತ್‌ನಲ್ಲಿ  40  ಸ್ಥಾನಗಳನ್ನು ಹೊಂದಿದೆ.

ವಿಧಾನಸಭೆ ಪ್ರತಿನಿಧಿಸುತ್ತಿರುವವರು: ತೆಲಂಗಾಣ ರಾಷ್ಟ್ರ ಸಮಿತಿ 63, ಕಾಂಗ್ರೆಸ್‌ 21, ತೆಲುಗು ದೇಶಂ ಪಕ್ಷ 15, ಆಲ್‌ ಇಂಡಿಯಾ ಮಜ್ಲೀಸ್ ಎ ಇತ್ತೇಹಾದುಲ್‌ ಮುಸ್ಲಿಮೀನ್‌ 7, ಬಿಜೆಪಿ 5 ಮತ್ತು ಇತರರು 8 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. 17 ಲೋಕಸಭೆ ಸ್ಥಾನಗಳನ್ನು ಒಳಗೊಂಡಿದೆ.

ನೂತನ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಕಲ್ವಕುಂಟ್ಲ ಚಂದ್ರಶೇಖರ್‌ ರಾವ್‌ ಅಧಿಕಾರ ಗದ್ದುಗೆ ಏರಿದ್ದಾರೆ. ಪ್ರಥಮ ರಾಜ್ಯಪಾಲರಾಗಿ ಎಕ್ಕಡು ಶ್ರೀನಿವಾಸನ್‌ ಲಕ್ಷೀನರಸಿಂಹನ್‌ ಅವರನ್ನು ನೇಮಿಸಲಾಗಿದೆ.

ರಾಜಧಾನಿ: ಹೈದರಾಬಾದ್‌. 10 ವರ್ಷಗಳ ಕಾಲ ಆಂಧ್ರಪ್ರದೇಶಕ್ಕೂ  ಹೈದರಾಬಾದ್‌ ರಾಜಧಾನಿಯಾ­ಗಿರಲಿದೆ. ವರಂಗಲ್‌, ನಿಜಾಮಾಬಾದ್‌ ಮತ್ತು ಕರೀಮ್‌ನಗರ ಈ ರಾಜ್ಯದ ಇತರ ಪ್ರಮುಖ ನಗರಗಳು.

ಭಾಷೆ: ಇಲ್ಲಿನ ಶೇ 76 ರಷ್ಟು ಜನ ತೆಲುಗು ಮಾತನಾಡುತ್ತಾರೆ. ಶೇ 12 ರಷ್ಟು ಜನ ಉರ್ದು ಭಾಷಿಕರಿದ್ದಾರೆ. ಅಲ್ಲದೆ ಶೇ 12 ರಷ್ಟು ಇತರ ಭಾಷೆಗಳನ್ನು ಮಾತನಾಡುವವರಿದ್ದಾರೆ.

ಸಾಕ್ಷರತೆ: ಪುರುಷರ ಸಾಕ್ಷರತೆ ಶೇ 75.6, ಮಹಿಳಾ ಸಾಕ್ಷರತೆ ಶೇ 58.77. ಒಟ್ಟಾರೆ ಸಾಕ್ಷರತೆ ಶೇ 67.2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT