ನವದೆಹಲಿ(ಐಎಎನ್ ಎಸ್): ಹಿಂಸಾಚಾರ ಪೀಡಿತ ಯೆಮನ್ ನಲ್ಲಿ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡಲು ಸಹಕಾರ ನೀಡುವುದಾಗಿ ಸೌದಿ ಅರೇಬಿಯಾ ಭಾರತಕ್ಕೆ ಭರವಸೆ ನೀಡಿದೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ವಿ.ಕೆ. ಸಿಂಗ್ ಅವರು ಮಂಗಳವಾರ ಯೆಮನ್ ನ ಡಿಜಿಬೋಟಿ ನಗರಕ್ಕೆ ತೆರಳಿದ್ದು, ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಬೇಕಿರುವ ಸಿದ್ಧತೆ ನಡೆಸಿದ್ದಾರೆ.

ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಆಲ್ ಸೌದ್ ಅವರ ಜತೆ ಸೋಮವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ‘ಭಾರತೀಯರನ್ನು ಸುರಕ್ಷಿತವಾಗಿ ಯೆಮನ್ ನಿಂದ ಕಳುಹಿಸಿಕೊಡಲು ಎಲ್ಲಾ ರೀತಿಯ ನೆರವು ಹಾಗೂ ಕ್ರಮ ಕೈಗೊಳ್ಳಲಾಗುವುದು’ ಎಂದು ಸೌದಿ ದೊರೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.