ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ 40 ಮೀನುಗಾರರ ಬಿಡುಗಡೆ

Last Updated 28 ನವೆಂಬರ್ 2014, 10:58 IST
ಅಕ್ಷರ ಗಾತ್ರ

ಕರಾಚಿ(ಪಿಟಿಐ): ಮೀನುಗಾರರು ಸೇರಿದಂತೆ 40 ಮಂದಿ ಬಂಧಿತ ಭಾರತೀಯರನ್ನು ಪಾಕಿಸ್ತಾನ ಇಲ್ಲಿನ ಕರಾಚಿ ಜೈಲಿನಿಂದ ಶುಕ್ರವಾರ ಬಿಡುಗಡೆ ಮಾಡಿದೆ.

ನೇಪಾಳದ ಕಠ್ಮಂಡುವಿನಲ್ಲಿ ನಡೆದ ಸಾರ್ಕ್ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಪರಸ್ಪರ ಹಸ್ತಲಾಘವ ಮಾಡಿದ ಬೆನ್ನಲ್ಲೇ ಪಾಕ್ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದೆ.

ಇತರ ನಾಲ್ವರು ಬಂಧಿತರು ಹಾಗೂ 36 ಮಂದಿ ಮೀನುಗಾರರು ಸೇರಿದಂತೆ ಒಟ್ಟು 40 ಮಂದಿ ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದವರಿಗೆ ಬಟ್ಟೆ ಹಾಗೂ ತಲಾ 10 ಸಾವಿರ ರೂಪಾಯಿಗಳನ್ನು ನೀಡಿ, ವಾಘಾ ಗಡಿ ಮೂಲಕ ಭಾರತಕ್ಕೆ ಕಳುಹಿಸಲು ಈದಿ ಫೌಂಡೇಷನ್ ವ್ಯವಸ್ಥೆ ಮಾಡಿದೆ ಎಂದು ಫೌಂಡೇಷನ್ ನ ವಕ್ತಾರ ಅನ್ವರ್ ಕಜ್ಮಿ ತಿಳಿಸಿದ್ದಾರೆ. 

ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಮೇ ತಿಂಗಳಲ್ಲಿ ಭಾರಕ್ಕೆ ಭೇಟಿ ನೀಡಿದ್ದ ಸಂರ್ಭದಲ್ಲಿ 151 ಮಂದಿ ಬಂಧಿತರನ್ನು ಪಾಕ್ ಬಿಡುಗಡೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT