ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮೂಲದ ಹಲವರ ಆಯ್ಕೆ

ಅಮೆರಿಕ ಮಧ್ಯಾಂತರ ಚುನಾವಣೆ: ಒಬಾಮ ಪಕ್ಷಕ್ಕೆ ಹಿನ್ನಡೆ
Last Updated 5 ನವೆಂಬರ್ 2014, 20:08 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಅಮೆರಿಕದಲ್ಲಿ ನಡೆದ ಮಧ್ಯಾಂತರ ಚುನಾವಣೆಗಳಲ್ಲಿ ಡೆಮಾಕ್ರೆಟಿಕ್‌ ಪಕ್ಷದ ನೀರಜ್‌ ಆಂಟನಿ ಸೇರಿದಂತೆ ಭಾರತ ಮೂಲದ ಹಲವರು ಕಾಂಗ್ರೆಸ್‌ಗೆ (ಸಂಸತ್‌) ಆಯ್ಕೆ­ಯಾಗಿದ್ದಾರೆ.

ಓಹಿಯೋ ಕ್ಷೇತ್ರದಿಂದ ಜನಪ್ರತಿನಿಧಿ ಸಭೆಗೆ (ಕಾಂಗ್ರೆಸ್‌ನ ಕೆಳಮನೆ) ಆಯ್ಕೆಯಾಗಿರುವ ನೀರಜ್‌ ಆಂಟನಿ (23) ಅತಿ ಕಿರಿಯ ವಯಸ್ಸಿನ ಜನಪ್ರತಿನಿಧಿ.

ಹವಾಯಿ ಕ್ಷೇತ್ರದಿಂದ 33 ವರ್ಷದ ತುಳಸಿ ಗಾಬರ್ಡ್‌ ಅವರು ಮರುಆಯ್ಕೆಯಾಗಿ­ದ್ದಾರೆ. ಅವರು ಕಾಂಗ್ರೆಸ್‌ಗೆ ಆಯ್ಕೆಯಾಗಿ­ರುವ ಏಕೈಕ ಹಿಂದೂ ಎನ್ನಲಾಗಿದೆ. 2012ರಲ್ಲಿ ಮೊದಲ ಬಾರಿಗೆ ಜನಪ್ರತಿನಿಧಿ ಸಭೆಗೆ ತುಳಸಿ ಆಯ್ಕೆಯಾಗಿದ್ದರು.

ನಿಕ್ಕಿ ಹ್ಯಾಲಿ ಅವರು ಎರಡನೇ ಬಾರಿಗೆ ದಕ್ಷಿಣ ಕರೊಲಿನಾದ ಗವರ್ನರ್‌ ಆಗಿ ಮರು ಆಯ್ಕೆ­ಯಾಗಿದ್ದಾರೆ.

ಕ್ಯಾಲಿಪೋರ್ನಿಯಾದ ಅಟಾರ್ನಿ ಜನರಲ್‌ ಆಗಿ ಕಮಲಾ ಹ್ಯಾರಿಸ್‌ ಪುನರಾಯ್ಕೆಯಾಗಿದ್ದಾರೆ. 50 ವರ್ಷದ ಹ್ಯಾರಿಸ್‌ ಅವರ ಅಧಿಕಾರಾವಧಿ ನಾಲ್ಕು ವರ್ಷ.

ನಿವೃತ್ತ ವೈದ್ಯಾಧಿಕಾರಿ ಪ್ರಸಾದ್‌ ಶ್ರೀನಿವಾಸನ್‌ (ರಿಪಬ್ಲಿ­ಕನ್‌ ಪಕ್ಷ) ಅವಿರೋಧವಾಗಿ, ಶ್ಯಾಮ್‌ ಸಿಂಗ್‌  (ಮೆರ್ರಿಲೆಂಡ್‌ ಕ್ಷೇತ್ರ) ಡೆಮಾಕ್ರೆಟಿಕ್‌ ಪಕ್ಷ­ದಿಂದ ಪುನರಾಯ್ಕೆಯಾಗಿದ್ದಾರೆ. ಇದಲ್ಲದೆ ಭಾರತೀಯರಾದ ಅರುಣಾ ಮಿಲ್ಲರ್‌, ಪ್ರಮೀಳಾ ಜೈಪಾಲ್‌ ಸೇರಿದಂತೆ ಹಲವರು ಸೆನೆಟ್‌ಗೆ ಪುನರಾಯ್ಕೆ­ಯಾಗಿದ್ದಾರೆ.

ರಿಪಬ್ಲಿಕನ್‌ ಪಕ್ಷಕ್ಕೆ ಬಹುಮತ
ಈ ಚುನಾವಣೆಯಲ್ಲಿ ರಿಪಬ್ಲಿಕ್‌ ಪಕ್ಷ ಮೇಲುಗೈ ಸಾಧಿಸಿದ್ದು, ಸೆನೆಟ್‌ನಲ್ಲಿ (ಮೇಲ್ಮನೆ) ಬಹುಮತ ಪಡೆದು­ಕೊಂಡಿದೆ. ಜನ­ಪ್ರತಿನಿಧಿ ಸಭೆ­ಯಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿ­ಕೊಂಡಿದೆ. ಇದ­ರಿಂದ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ಮತ್ತ­ವರ ಡೆಮಾಕ್ರೆ­ಟಿಕ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಈ ಚುನಾವಣೆ­ಯಲ್ಲಿ 7 ಸ್ಥಾನ­ಗಳನ್ನು ಡೆಮಾಕ್ರೆ­ಟಿಕ್‌ ಪಕ್ಷದಿಂದ ಕಿತ್ತು­ಕೊಂಡಿ­ರುವ ರಿಪಬ್ಲಿಕ್‌ ಪಕ್ಷ, ಸೆನೆಟ್‌ನಲ್ಲಿ 8 ವರ್ಷಗಳ ಬಳಿಕ ನಿರ್ಣಾಯಕ ಪಾತ್ರ ವಹಿಸುವ ಸ್ಥಿತಿ ತಲುಪಿದೆ. ಜನಪ್ರತಿನಿಧಿ ಸಭೆಯ ಎಲ್ಲ 435 ಸ್ಥಾನಗಳಿಗೆ, ಸೆನೆಟ್‌ನ 100 ಸ್ಥಾನಗಳ ಪೈಕಿ 36ಕ್ಕೆ 50 ರಾಜ್ಯಗಳ ಪೈಕಿ 36 ರಾಜ್ಯ ಮತ್ತು ಪ್ರಾದೇ­ಶಿಕ ಗವರ್ನರ್‌ ಹುದ್ದೆಗಳಿಗೆ ಚುನಾವಣೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT