ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳ ನೌಕೆಯ ದ್ರವ ಎಂಜಿನ್‌ಗೆ ಚಾಲನೆ: ಇಸ್ರೊ ಸಿದ್ಧತೆ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಮಂಗಳ ನೌಕೆಯ (ಮಾರ್ಸ್‌ ಆರ್ಬಿಟರ್‌) ದ್ರವಚಾಲಿತ ಎಂಜಿ­ನ್ ಅನ್ನು ಮರುಚಾಲನೆಗೊಳಿಸುವ ನಾಜೂಕಿನ ಹಾಗೂ ಸವಾಲಿನ ಕಾರ್ಯ ಕೈಗೊಳ್ಳಲು ಇಸ್ರೊ ವಿಜ್ಞಾನಿಗಳು ಸಜ್ಜಾಗುತ್ತಿದ್ದಾರೆ.

ಕಳೆದ ನ.5ರಂದು ನಭಕ್ಕೆ ಚಿಮ್ಮಿದ ಈ ನೌಕೆಯು ಸೆ.24ರಂದು ಅಂಗಾರಕನ ಕಕ್ಷೆ ಪ್ರವೇಶಿಸುವ ನಿರೀಕ್ಷೆ ಇದ್ದು, ಅದೇ ದಿನ ಬೆಳಿಗ್ಗೆ 7.30ಕ್ಕೆ ವಿಜ್ಞಾನಿಗಳು ದ್ರವಚಾಲಿತ ಎಂಜಿನ್‌ಗೆ ಚಾಲನೆ ನೀಡಲಿದ್ದಾರೆ. ಈ ದ್ರವಚಾಲಿತ ಎಂಜಿನ್‌ ಸುಮಾರು 10 ತಿಂಗಳುಗಳಿಂದ ಸ್ತಬ್ಧ­ವಾಗಿದೆ. ಮಂಗಳನೌಕೆಯ ವೇಗವನ್ನು ತಗ್ಗಿಸುವ ಜತೆಗೆ ಅದನ್ನು ಮಂಗಳನ ಕಕ್ಷೆಗೆ ಸರಿಹೊಂದಿಸಲು ಈ ಎಂಜಿನ್‌ ಉರಿಸುವುದು ಅತ್ಯಗತ್ಯ ಎಂದು ಇಸ್ರೊ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT