ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಟೆಲಿಂಗಯ್ಯಗೆ ಜೀವಾವಧಿ ಶಿಕ್ಷೆ

ಮೈಸೂರಿನ ಲಕ್ಷ್ಮೀಕಾಂತ ನಗರದ ಗಂಗಮ್ಮ ಕೊಲೆ ಪ್ರಕರಣ
Last Updated 2 ಸೆಪ್ಟೆಂಬರ್ 2015, 20:09 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರಿನ ಲಕ್ಷ್ಮೀಕಾಂತ ನಗರ ನಿವಾಸಿ ಗಂಗಮ್ಮ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅಖಿಲ ಭಾರತ ಜನಜಾಗೃತಿ ಮಹಾಸಭೆ ಮುಖಂಡ ಮಂಟೆಲಿಂಗಯ್ಯ ಸೇರಿದಂತೆ 10 ಮಂದಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ.

ಈ ಪ್ರಕರಣದಲ್ಲಿ 4ನೇ ಹೆಚ್ಚುವರಿ ಮೈಸೂರು ಜಿಲ್ಲಾ ನ್ಯಾಯಾಲಯದಿಂದ   ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 18 ಆರೋಪಿಗಳ ಮೇಲ್ಮನವಿಯ ಆದೇಶವನ್ನು ಬುಧವಾರ ಪ್ರಕಟಿಸಲಾಗಿದೆ. ನ್ಯಾಯಮೂರ್ತಿ ಮೋಹನ ಎಂ. ಶಾಂತನಗೌಡರ್ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿತ್ತು.

ಶಿಕ್ಷೆ ಕಾಯಂಗೊಂಡವರು: ‘ಮಂಟೇಲಿಂಗಯ್ಯ, ನಾಗರಾಜ ಆಲಿಯಾಸ್‌ ಕೆಂಚ, ಚಂದ್ರಮ್ಮ, ಭಾಗ್ಯಮ್ಮ, ಶಿವಶೆಟ್ಟಿ, ಗಂಗೋತ್ರಿ ಮಹದೇವ, ಬಾರ್‌ ಬೆಂಡಿಂಗ್ ನಂಜ, ಚಿಕ್ಕ ಅಂದಾನಿ ಆಲಿಯಾಸ್‌ ಅಂದಾನಯ್ಯ, ಎಚ್‌.ಕೆ.ಪುಟ್ಟು, ಮಧು ಆಲಿಯಾಸ್ ಮಧುಬಾಲ ಅವರ ಶಿಕ್ಷೆಯನ್ನು ಕಾಯಂಗೊಳಿಸಿ ಆದೇಶಿಸಲಾಗಿದೆ.
ಭಾಗಶಃ ಅಂಗೀಕಾರ: ದೇವಮ್ಮ, ಸರೋಜಮ್ಮ, ಶ್ರೀಧರ ಇವರ ಮೇಲ್ಮನವಿಯನ್ನು ಭಾಗಶಃ ಅಂಗೀಕರಿಸಲಾಗಿದೆ.

ಖುಲಾಸೆಗೊಂಡವರು: ಮಹಾದೇವ, ಜಯರಾಮ್‌, ಲೋಕೇಶ್‌ ಮತ್ತು ಮಂಟೇಲಿಂಗಯ್ಯನ ಪತ್ನಿ ವಿಕಾಶಿಣಿ ಇವರನ್ನು ಖುಲಾಸೆಗೊಳಿಸಲಾಗಿದೆ.
‘ಅಖಿಲ ಭಾರತ ಜನಜಾಗೃತಿ ಮಹಾಸಭೆ ಸಂಘಟನೆಯ ಸದಸ್ಯೆಯಾಗಿದ್ದ ಗಂಗಮ್ಮಳನ್ನು ಮಂಟೆಲಿಂಗಯ್ಯ ಮತ್ತು ಆತನ ತಂಡವು 2005ರ ನವೆಂಬರ್‌ 17ರಂದು ಅಪಹರಿಸಿ ಎಚ್‌.ಡಿ.ಕೋಟೆ ತಾಲ್ಲೂಕಿನ ವಡ್ಡರಪಾಳ್ಯದಲ್ಲಿ ಕೊಲೆ ಮಾಡಿತ್ತು. ಆಕೆಯ ಮೇಲೆ ಟಾಟಾ ಸುಮೊ ವಾಹನವನ್ನು ಮೈಮೇಲೆ ಹರಿಸಿ ಭೀಕರವಾಗಿ ಹತ್ಯೆಗೈದು ನಂತರ ಶವವನ್ನು ಕಬಿನಿ ನದಿಯಲ್ಲಿ ಬಿಸಾಡಿ ಹೋಗಲಾಗಿತ್ತು’ ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಆಶ್ರಯ ಮನೆ ಮತ್ತು ನಿವೇಶನಗಳ ಕುರಿತ ಹಗರಣವನ್ನು ಗಂಗಮ್ಮ ಬಯಲಿಗೆಳೆದಿದ್ದಳು. ಈ ಹಗರಣದಲ್ಲಿ ಮಂಟೆಲಿಂಗಯ್ಯ ಭಾಗಿ­ಯಾ­ಗಿ­ದ್ದಾನೆ ಎಂದು ಆಕೆ ಮಾಧ್ಯಮಗಳ ಮುಂದೆ ಆರೋಪಿಸಿದ್ದಳು. ಈ ಕಾರಣ­ಕ್ಕಾಗಿ ಗಂಗಮ್ಮಳನ್ನು ಕೊಲೆ ಮಾಡ­ಲಾಗಿದೆ’ ಎಂದು ಆರೋಪಿಸಲಾಗಿತ್ತು. ಪ್ರಾಸಿಕ್ಯೂಷನ್‌ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌–2 ಕೆ.ಆರ್‌.ಕೇಶವ­ಮೂರ್ತಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT