ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಹಂತಕನ ಕ್ಷಮಿಸಿದ ತಾಯಿ!

Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಟೆಹರಾನ್‌(ಎಎಫ್‌ಪಿ):  ಇನ್ನೇನು ನೇಣಿ­ಗೇರ­ಬೇಕಾಗಿದ್ದ ಮಗನ ಕೊಲೆ­ಗಾರ­ನನ್ನು ತಾಯಿಯೇ ರಕ್ಷಿಸಿದ ಅಪ­ರೂಪದ ಘಟನೆ­ ಇರಾನ್‌­ನಲ್ಲಿ ನಡೆದಿದೆ.

೨೦೦೭ರಲ್ಲಿ ನಡೆದ ಬೀದಿ ಕಾಳಗ­ದಲ್ಲಿ ಬಲಾಲ್‌ ಎಂಬಾತ ಅಬ್ದುಲ್ಲಾ ಹುಸೇನ್‌ ಜಾದ್‌ ಎಂಬಾತನನ್ನು ಚಾಕು­ವಿನಿಂದ ಇರಿದು ಕೊಲೆ ಮಾಡಿದ್ದ.  ಈ ಆರೋಪಕ್ಕಾಗಿ ಬಲಾಲ್‌­­ನನ್ನು ಮಂಗಳ­ವಾರ ಬೆಳಿಗ್ಗೆ ಸಾರ್ವ­ಜನಿಕವಾಗಿ ನೇಣಿ­ಗೇರಿ­ಸಲು ಸಿದ್ಧತೆ ಮಾಡ­ಲಾಗಿತ್ತು.

ಆದರೆ ಆ ವೇಳೆಗೆ ಅಲ್ಲಿ ಬಂದ ಹುಸೇನ್‌ ತಾಯಿ ಸಮೆರಾ ಅಲಿನೆಜಾದ್‌, ‘ಮಕ್ಕಳಿ­ಲ್ಲದ ಮನೆ­ಯಲ್ಲಿ ಬದುಕುವುದು ಎಷ್ಟು ಕಷ್ಟ ಎನ್ನು­ವುದು ನಿಮಗೆ ಗೊತ್ತಾ’ ಎಂದು ಅಲ್ಲಿ ಸೇರಿದ್ದ ಜನಸ್ತೋಮವನ್ನು ಕೇಳಿ­­ದರು. ನಂತರ ಭಾವೋ­ದ್ವೇಗದಿಂದ ಬಲಾಲ್‌ ಕೆನ್ನೆಗೆ ಹೊಡೆದು ಆತನ ಕೊರಳ­ಲ್ಲಿದ್ದ ಕುಣಿಕೆಯನ್ನು ಕಳಚಿದರು. 

‘ನನಗೆ ನಂಬಿಕೆ ಇದೆ.  ನನ್ನ ಪುತ್ರ ಕನಸಿ­ನಲ್ಲಿ ಬಂದು ಅಮ್ಮಾ ನಾನು ಇಲ್ಲಿ ಶಾಂತಿ­ಯಿಂದ ಇದ್ದೇನೆ ಎಂದಿದ್ದ. ಇದಾದ ಬಳಿಕ ನನ್ನ ತಾಯಿ ಸೇರಿದಂತೆ ಎಲ್ಲ ಬಂಧುಗಳು ನನ್ನ ಪುತ್ರನನ್ನು ಕೊಲೆ ಮಾಡಿದ ಆರೋಪಿಯನ್ನು ಕ್ಷಮಿಸು­ವಂತೆ ಒತ್ತಾಯಿಸಿದರು.’
‘ಜೀವದಾನ ನೀಡಿ ಎಂದು ಆರೋಪಿ ಕೂಗಿಗೊಳ್ಳುತ್ತಿದ್ದ. ನಾನು ಆತನ ಕೆನ್ನೆಗೆ ಬಾರಿಸಿದೆ. ಆಗ ನನಗೆ ಸಮಾಧಾನ­ವಾ­ಯಿತು. ಈಗ ನಾನು ಅವನನ್ನು ಕ್ಷಮಿಸಿ­ದ್ದೇನೆ. ನನ್ನಲ್ಲಿ ನಿರಾಳ ಭಾವ ಮನೆ ಮಾಡಿದೆ’ ಎಂದು ಸಮೆರಾ ಅಲಿನೆಜಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT