ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ: ಹಾಸ್ಯಾಸ್ಪದ ಹೇಳಿಕೆ

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಹಿಂದುಳಿದ ವರ್ಗಗಳ ಆಯೋಗ ನಡೆ­ಸ­ಲಿ­ರುವ ಜಾತಿ ಜನಗಣತಿಯಿಂದ ಮತಾಂತ­ರಕ್ಕೆ ಪ್ರೇರಣೆ ದೊರೆಯಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.­ಈಶ್ವರಪ್ಪ ನೀಡಿರುವ ಹೇಳಿಕೆ (ಪ್ರ.ವಾ., ನ. 26) ಹಾಸ್ಯಾಸ್ಪದ­ವಾ­ಗಿದೆ. ಸಂವಿಧಾನದ ನಿಯಮಾ­ನು­ಸಾರ ಸ್ಥಾಪಿ­ಸಿರುವ ಯಾವುದೇ ಆಯೋಗ, ಮತಾಂತ­ರ­ದಂತಹ ಗಂಭೀರ ಸಾಮಾ­ಜಿಕ ವಿಚಾರ­ವನ್ನು ಪ್ರೋತ್ಸಾಹಿ­ಸಲು ಸಾಧ್ಯವಿಲ್ಲ.

ಹಿಂದುಳಿದ ವರ್ಗಗಳ ಆಯೋಗ ಜನ­ಗಣತಿಗಾಗಿ ಸಿದ್ಧಪಡಿಸಿರುವ ಪ್ರಶ್ನಾ­ವಳಿ­ಯಲ್ಲಿ ಮತಾಂತರ­ವಾದ­ವರ ಬಗ್ಗೆ ಮಾಹಿ­ತಿ­ಯನ್ನು ಪಡೆಯು­ತ್ತಿರು­ವುದು ಸಾಂವಿ­ಧಾನಿಕ ವಿರೋಧಿ ನಡೆಯಲ್ಲ. ಪರಿ­ಶಿಷ್ಟರಿಂದ ಕ್ರೈಸ್ತ ಧರ್ಮಕ್ಕೆ ಮತಾಂ­ತರವಾ­ದವರನ್ನು ಹಿಂದುಳಿದ ವರ್ಗ­ವಾಗಿ ಗುರು­ತಿ­ಸುವ ರೂಢಿ ಹಾವನೂರು ಆಯೋಗದ ಕಾಲದಿಂದಲೂ ನಡೆದಿದೆ.

ಪ್ರಸ್ತುತ ಜನಗಣತಿ ಪ್ರಕ್ರಿಯೆಗಳು ಹಿಂದಿನ ಸಂಪ್ರ­ದಾಯಗಳನ್ನು ಮುಂದು­­ವರಿಸಿವೆ ಅಷ್ಟೆ. ವಿವಿಧ ರಾಜ್ಯ ಸರ್ಕಾರಗಳ ಹಿಂದುಳಿದ ವರ್ಗಗಳ ಆಯೋಗಗಳು ಮತ್ತು ಕೇಂದ್ರ ಸರ್ಕಾರದ ಆಯೋಗ ಸಹ ಈ ರೀತಿಯ ಸಂಪ್ರದಾಯವನ್ನು ಪಾಲಿಸುತ್ತಿವೆ. ಪರಿ­ಶಿಷ್ಟ ಸಮೂಹ­ದಿಂದ ಒಮ್ಮೆ ಮತಾಂತರ­ವಾದವ­ರನ್ನು ಅವರ ಮೂಲಜಾತಿ­ಯವ­ರ­ನ್ನಾಗಿ ಗುರುತಿ­ಸಲು ಕಾನೂನಿನಲ್ಲಿ ಅವ­ಕಾಶವಿಲ್ಲ ಅಥವಾ  ಮತಾಂತರ ಕಾರಣ­ಕ್ಕಾಗಿ ಸೇಡಿನ ಕ್ರಮ­ವಾಗಿ ಅವರಿಗೆ ಹಕ್ಕು­ಗ­ಳನ್ನು ನಿರಾಕರಿ­ಸು­ವಂತಿಲ್ಲ. ಹಿಂದುಳಿದ ವರ್ಗ­ಗಳ ಆಯೋಗ ಸಿದ್ಧಪಡಿಸಿರುವ ಪ್ರಶ್ನಾವ­ಳಿಯು ಮತಾಂತರವನ್ನು ಪ್ರೋತ್ಸಾ­­ಹಿಸು­ತ್ತದೆ ಅನ್ನುವುದು ಸಂಪೂರ್ಣ ಸುಳ್ಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT