ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಘಟಕಗಳಿಗೆ ನೀರು ಸ್ಥಗಿತಕ್ಕೆ ‘ಸುಪ್ರೀಂ’ ನಕಾರ

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬರಪೀಡಿತ ಪ್ರದೇಶದ ಮದ್ಯ ಉತ್ಪಾದನಾ ಘಟಕಗಳಿಗೆ ನೀರು ಸರಬರಾಜನ್ನು ಸಂಪೂರ್ಣ ನಿಲ್ಲಿಸುವಂತೆ ಮಾಹಾರಾಷ್ಟ್ರ ಸರ್ಕಾರಕ್ಕೆ ಆದೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಬಾಂಬೆ ಹೈಕೋರ್ಟ್ ಈ ವಿಚಾರದಲ್ಲಿ ಈಗಾಗಲೇ ಮಧ್ಯಂತರ ಆದೇಶ ಹೊರಡಿಸಿದ್ದರೂ ಅರ್ಜಿದಾರರು ಈ ವಿಚಾರವಾಗಿ ಸುಪ್ರೀಂಕೋರ್ಟ್ ಮೇಟ್ಟಲೇರಿರುವ ಬಗ್ಗೆ ರಜಾ ಕಾಲದ ನ್ಯಾಯಪೀಠದ ನ್ಯಾಯಮೂರ್ತಿಗಳಾದ ಪಿ. ಸಿ. ಪಂತ್ ಮತ್ತು ಡಿ.ವೈ. ಚಂದ್ರಚೂಡ ಅವರು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡರು.

ಹೈಕೋರ್ಟ್ ಈಗಾಗಲೇ ಶೇಕಡ 60ರಷ್ಟು ನೀರು ಪೂರೈಕೆ ಸ್ಥಗಿತಗೊಳಿಸಲು ಆದೇಶಿಸಿದೆ.

ಆದರೂ ನೀವು (ಅರ್ಜಿದಾರರು) ಇಲ್ಲಿಯವರೆಗೆ ಏಕೆ ಬಂದಿದ್ದೀರಿ? ಇವೆಲ್ಲ ಸರ್ಕಾರದ ನೀತಿ ನಿರ್ಧಾರಗಳು. ಆದ್ದರಿಂದ ಸಮತೋ ಲನದ ನಿರ್ಧಾರ ತೆಗೆದುಕೊಳ್ಳಬೇಕಾ ಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT