ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ನಿಷೇಧಿಸಿ

Last Updated 29 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ನಿಷೇಧಕ್ಕೆ ಮುನ್ನ ಸಾರಾಯಿ ಬರೀ 10 ರೂಪಾಯಿಗೆ ಸಿಗುತ್ತಿತ್ತು. ಈಗ 250 ಎಂ.ಎಲ್‌. ಮದ್ಯಕ್ಕೆ 80 ರೂಪಾಯಿ ಕೊಡಬೇಕು. ಇದು  ಕಿಸೆಗೆ ಹೊರೆಯಲ್ಲವೇ ಎಂಬರ್ಥದಲ್ಲಿ ಮುಖ್ಯಮಂತ್ರಿಯವರು ಮಾತಾಡಿದ್ದಾರೆ. ವಾಹ್!  ಎಂಥ ಸೂಕ್ಷ್ಮ ದೃಷ್ಟಿ... ಎಂಥ ಅದ್ಭುತ ಕಾಳಜಿ!?

ಮದ್ಯ ಹಾಗೂ ತಂಬಾಕಿನಂತಹ ಚಟದ ಪಾನೀಯ, ಪದಾರ್ಥಗಳು ದುಬಾರಿಯಾದಷ್ಟೂ ಅವುಗಳ ಬಳಕೆ ಕಡಿಮೆಯಾಗುತ್ತದೆ ಎಂಬುದು ಮುಖ್ಯಮಂತ್ರಿಗೆ ಗೊತ್ತಿಲ್ಲವೇ?

ಹಿಂದಿದ್ದ ಸರ್ಕಾರ ಅರ್ಧ ಕೆಲಸ ಮಾಡಿತು. ಈ ಸರ್ಕಾರ ಇನ್ನರ್ಧ ಮಾಡಿ ಅದನ್ನು ಪೂರ್ಣಗೊಳಿಸಬೇಕು. ಸಾರಾಯಿ ಮಾರಾಟವನ್ನು ಮತ್ತೆ ಆರಂಭಿಸುವ ಪ್ರಸ್ತಾವ ಬಿಟ್ಟು, ಮದ್ಯ ಮಾರಾಟ ಸಂಪೂರ್ಣ ನಿಷೇಧಕ್ಕೆ ಮುಂದಾಗಬೇಕು. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಬರುವ ಒಂದಿಷ್ಟು ಹಣ ಬಾರದೇ ಇರಬಹುದು. ಆದರೆ ಕುಡಿತದಿಂದ ಹಾಳಾಗಲಿರುವ ಲಕ್ಷಾಂತರ ಕುಟುಂಬಗಳನ್ನು ರಕ್ಷಿಸಿದಂತಾಗುತ್ತದೆ. ಮುಖ್ಯಮಂತ್ರಿಯವರಿಗೆ ಹೆಣ್ಣು ಮಕ್ಕಳ ಕಣ್ಣೀರನ್ನು ಕಡಿಮೆ ಮಾಡಬೇಕು ಎಂಬ ಇಚ್ಛೆ ಬಲವಾಗಿ ಇದ್ದರೆ, ಮದ್ಯ ಮಾರಾಟವನ್ನು ನಿಷೇಧಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT