ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆತುಹೋದ ಹೋರಾಟಗಾರ

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ ನಿಜಾಮರ ದುರಾಡಳಿತ, ಅಮಾಯಕ ಜನರ ಮೇಲಿನ ದೌರ್ಜನ್ಯ, ಅತ್ಯಾ ಚಾರ, ಶೋಷಣೆಯ ವಿರುದ್ಧ ಸಿಡಿದೆದ್ದು ಹೈದ ರಾಬಾದ್‌ ಪ್ರಾಂತ ಕಾಂಗ್ರೆಸ್ ಪಕ್ಷವನ್ನು ಕಟ್ಟಿ, ನಿಜಾಮರಿಂದ ತುಳಿತಕ್ಕೊಳಗಾದ ಜನರನ್ನು ಸಂಘಟಿಸಿದವರು ಮತ್ತು ೧೯೪೮ರ ಸೆಪ್ಟೆಂಬರ್‌­ನಲ್ಲಿ ಜರು­ಗಿದ ಹೈದರಾಬಾದ್‌ ಕರ್ನಾಟಕ ವಿಮೋ­ಚನಾ  ಹೋರಾಟದ ನಾಯಕತ್ವ ವಹಿಸಿ­ಕೊಂಡಿ­ದ್ದವರು ಸ್ವಾಮಿ ರಾಮಾನಂದ ತೀರ್ಥರು.

ಈ ಮಹನೀಯರ ಹೆಸರಿನಲ್ಲಿ ಸಿಂದಗಿಯಲ್ಲಿ  ವೀರಸೌಧ ರಾಷ್ಟ್ರೀಯ ಸ್ಮಾರಕವನ್ನು ನಿರ್ಮಿಸ­ಲಾಗಿದೆ. ಆದರೆ ಪ್ರತಿವರ್ಷ ಸೆ. ೧೭ರಂದು ನಡೆಯುವ ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆ ಹಾಗೂ ಅವರ ಹುಟ್ಟುಹಬ್ಬದ ದಿನ ಅವರನ್ನು ನೆನೆಯುವ  ಕಾರ್ಯಕ್ಕೆ ಸ್ಥಳೀಯ ಜನಪ್ರತಿನಿಧಿ­ಗಳಾಗಲಿ, ತಾಲ್ಲೂಕು ಆಡಳಿತವಾಗಲಿ ಮುಂದಾ­­ಗದೇ ಇರುವುದು ನೋವಿನ  ಸಂಗತಿ.

ರಾಮಾನಂದ ತೀರ್ಥರ ನಿಸ್ವಾರ್ಥ ಸೇವೆ­ಗಾಗಿ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಹೈದರಾಬಾದ್‌ ಕರ್ನಾ­ಟಕ ಪ್ರದೇಶಗಳಲ್ಲಿ ಜನ ಅವರನ್ನು ಪೂಜ್ಯಭಾವ­ದಿಂದ ಕಾಣುತ್ತಾರೆ. ಆದರೆ ಹುಟ್ಟೂರಿ­ನಲ್ಲಿಯೇ ಅವರನ್ನು ನೆನೆಯ­ದಿರುವುದು ವಿಪರ್ಯಾಸ. 
–ಸಂತೋಷ ಬಿ. ಜಾಲವಾದಿ, ಸಿಂದಗಿ-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT