ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇರಿಯಾ ತಡೆಗೆ ಮುನ್ನೆಚ್ಚರಿಕೆ ಕ್ರಮ

ಭದ್ರಾವತಿ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ: ಅಧಿಕಾರಿಗಳಿಂದ ವರದಿ ಸಲ್ಲಿಕೆ
Last Updated 7 ಜುಲೈ 2015, 6:31 IST
ಅಕ್ಷರ ಗಾತ್ರ

ಭದ್ರಾವತಿ: ‘ತಾಲ್ಲೂಕಿನಲ್ಲಿ  10 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದು, ಸಂಬಂಧಪಟ್ಟವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಜತೆಗೆ  ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಗುಡದಪ್ಪ ಕಸಬಿ ಹೇಳಿದರು. ಸೋಮವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಕಲುಷಿತ ನೀರಿನ ಸೇವನೆ ಪರಿಣಾಮ ಗ್ರಾಮೀಣ ಭಾಗದ ಕುಡಿಯುವ ನೀರಿನ ಸುಮಾರು 1094 ಸ್ಯಾಂಪಲ್‌ನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸುಮಾರು 43 ಕಡೆ ಕುಡಿಯಲು ಯೋಗ್ಯವಲ್ಲದ ನೀರು ಕೊಳವೆಯಲ್ಲಿ ಹರಿದಿದೆ ಎಂಬ ಮಾಹಿತಿಯ ಆಧಾರದ ಮೇಲೆ ನೀರು ಸರಬರಾಜು ಪೈಪುಗಳ ಬದಲಾವಣೆಗೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ವಿಶೇಷ ಆಯುಷ್ ಯೋಜನೆಯಲ್ಲಿ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿಗೆ ನೆರವು ನೀಡಿದ್ದು, ಪಂಚಾಯ್ತಿ ಸದಸ್ಯರ ಅನುಮೋದನೆ ಮೂಲಕ ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ’ ಎಂದು ಅವರು ವಿವರ ನೀಡಿದರು. ತೋಟಗಾರಿಕೆ ಇಲಾಖೆಯಿಂದ ಶಾಲೆಗಳಿಗೆ ಅವಶ್ಯ ಇರುವ ಸಸಿಗಳನ್ನು ನೆಡಲು ನೆರವು ನೀಡಲಾಗಿದ್ದು, ಅದರಂತೆ ಕೆಲಸ ನಡೆದಿದೆ ಎಂದು ಅಧಿಕಾರಿ ರಘುನಾಥ ಮಾಹಿತಿ ನೀಡಿದರು.

ಇದಲ್ಲದೆ ಶೌಚಾಲಯ ಹೊಂದಿದ ಕುಟುಂಬಗಳಿಗೆ ಗಿಡಗಳನ್ನು ವಿತರಣೆ ಮಾಡಲಾಗಿದ್ದು, ಅವುಗಳ ರಕ್ಷಣೆಗೆ ₹1,450 ಸಹಾಯಧನದ ನೆರವು ನೀಡುವ ಕೆಲಸ  ನಡೆದಿದೆ ಎಂದು ಹೇಳಿದರು. ಕೆಲವೆಡೆ ಅಂತ್ಯೋದಯ ಪಡಿತರಚೀಟಿ ರದ್ದು ಮಾಡಿ ಎಪಿಎಲ್ ಕಾರ್ಡ್ ವಿತರಣೆ ಮಾಡಿರುವ ಘಟನೆ ನಡೆದಿದ್ದು, ಈ ರೀತಿ ಮಾಡುವುದು ಖಂಡನೀಯ ಎಂದು ಸದಸ್ಯ ನಂಜುಂಡೇಗೌಡ ಆಕ್ಷೇಪ ವ್ಯಕ್ತ ಪಡಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿ ಕೇಶವಯ್ಯ ಅವರು, ‘ಅಂತ್ಯೋದಯ ಕಾರ್ಡ್ ರದ್ದು ಮಾಡುವ ಕ್ರಮ ಜರುಗಿಸಿಲ್ಲ. ಅದನ್ನು ಸರಿಪಡಿಸುವ ಪ್ರಯತ್ನ ಇಲಾಖೆಯಿಂದ ನಡೆಯಲಿದೆ’ ಎಂದು ಅವರು  ಭರವಸೆ ನೀಡಿದರು. ಅಧ್ಯಕ್ಷ ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆ ಅಧಿಕಾರಿಗಳು  ಪ್ರಗತಿ ಕುರಿತು ಸಭೆಯಲ್ಲಿ ವರದಿ ಸಲ್ಲಿಸಿದರು.  ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಇಒ ಗಂಗಾಧರಪ್ಪ, ಉಪಾಧ್ಯಕ್ಷ ಶ್ರೀನಿವಾಸ, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ  ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT