ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಗಿ ಪ್ರಾರ್ಥನೆ

Last Updated 16 ಸೆಪ್ಟೆಂಬರ್ 2014, 9:09 IST
ಅಕ್ಷರ ಗಾತ್ರ

ಬಂಗಾರಪೇಟೆ:  ಮಳೆಗಾಗಿ ಪ್ರಾರ್ಥಿಸಿ ಸೋಮವಾರ ಪಟ್ಟಣದ ಸಿದ್ಧಾರ್ಥ ನಗರದ ನಿವಾಸಿಗಳು ವಿಶೇಷ ಪೂಜೆ ಸಲ್ಲಿಸಿದರು.

ಜೇಡಿ ಮಣ್ಣಿನಲ್ಲಿ ಮಾಡಿದ್ದ ಮಳೆ­ರಾಯನ ಮೂರ್ತಿ ತಲೆ ಮೇಲೆ ಹೊತ್ತು, ಬೀದಿಗಳಲ್ಲಿ ಮೆರವಣಿಗೆ ನಡೆ­ಸಿದರು. ‘ಬಾರೊ ಬಾರೊ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ. ಹುಯ್ಯೋ ಹುಯ್ಯೋ ಮಳೆರಾಯ ಊರಿನ ಬೆಳೆಗೆ ನೀರಿಲ್ಲ’ ಎಂದು ಕೂಗಿ,ಯುವಕರು ಮಳೆರಾಯನ ಸುತ್ತ ಕುಣಿದರು. ಕೆಲ ಸಂದರ್ಭ ಆಕಾಶದತ್ತ ಮುಖ ಮಾಡಿ ಬಾಯಿ ಬಡಿದುಕೊಳ್ಳುತ್ತಿದ್ದರು. ಹಾಗೆ ಮಾಡುವುದರಿಂದ ಮಳೆ ಬರುತ್ತದೆ ಎನ್ನುವುದು ಅವರ ನಂಬಿಕೆ.

ಬಡಾವಣೆಯ ಪ್ರತಿಯೊಂದು ಮನೆಯಲ್ಲಿ ಮಳೆರಾಯನ ಮೇಲೆ ನೀರು ಸುರಿದು ಪೂಜೆ ಸಲ್ಲಿಸಲಾ­ಯಿತು. ಮೆರವಣಿಗೆ ನಂತರ  ಮೂರ್ತಿ­ಯನ್ನು ಕೆರೆಯಲ್ಲಿ ವಿಸರ್ಜಿಸ­ಲಾಯಿತು.

ಚಂದ್ರಶೇಖರ್‌ ರಾವ್‌ ನೇತೃತ್ವ ವಹಿ­ಸಿದ್ದರು. ಗಣಪತಿ ರಾವ್, ಕುಮಾರ್‌, ದಯಾನಂದ್‌, ಚಿಟ್ಟಿಬಾಬು, ಕುಮ­ರೇಶನ್‌, ಮಹೇಶ್‌, ಚಲಪತಿ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT