ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನ ಮರದ ರೆಂಬೆ ಕೊಂಬೆ

Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಪ್ರತಿಯೊಂದು ಪದವನ್ನೂ ವಾಕ್ಯವೊಂದರಲ್ಲಿ ಮಾಡುವ ಕೆಲಸ ಅಥವಾ ವರ್ತಿಸುವ ರೀತಿಗನುಗುಣವಾಗಿ ಹೆಸರಿಸಬಹುದು.

ಪ್ರಮುಖವಾಗಿ ಇಂಗ್ಲಿಷ್ ಪದಗಳನ್ನು 8 ಗುಂಪುಗಳನ್ನಾಗಿ ವಿಂಗಡಿಸಬಹುದು. ಇಂಗ್ಲಿಷ್‌ನ ಎಲ್ಲಾ ಒಂದು ಮಿಲಿಯನ್ ಶಬ್ದಗಳೂ ಈ 8 ಗುಂಪುಗಳಲ್ಲಿ ಯಾವುದಾದರೂ ಒಂದಕ್ಕೆ ಸೇರಿರುತ್ತವೆ. ಅವುಗಳನ್ನೇ parts of speech ಎಂದು ಕರೆಯುತ್ತೇವೆ. ಇವುಗಳನ್ನು ಅರ್ಥಮಾಡಿಕೊಂಡು ಸರಿಯಾದ ರೀತಿಯಲ್ಲಿ ಉಪಯೋಗಿಸದಿದ್ದರೆ, ಸರಿಯಾದ ವಾಕ್ಯರಚನೆಯು ಸಾಧ್ಯವಾಗುವುದಿಲ್ಲ. ಈ 8 ಗುಂಪುಗಳನ್ನು ಇಲ್ಲಿ ಗಮನಿಸಿ:
1. Naming words (noun) -ಹೆಸರನ್ನು ಸೂಚಿಸುವ ಪದಗಳು.
ಉದಾ: Pallavi is a doctor.
Bangalore is a cool place.
The books are on the table.

2. Name substitutes (pronoun) - ಹೆಸರುಗಳಿಗೆ ಬದಲಾಗಿ ಉಪಯೋಗಿಸುವ ಪದಗಳು.
ಉದಾ: She is a doctor.
It is a cool place.
They are on the table.

3. Action words (verb) -  ಕ್ರಿಯೆಯನ್ನು ಸೂಚಿಸುವ ಪದಗಳು. ಉದಾ: She sings melodiously.
The baby dances well.

4. Action describing words (adverb) - ಕ್ರಿಯೆಯ ಬಗ್ಗೆ ಹೆಚ್ಚಿನ ಮಾಹಿತಿ ಕೊಡುವ ಪದಗಳು.
ಉದಾ: He runs fast.
She comes quickly.

Name describing words (adjective) -ನಾಮಪದಗಳ ಬಗ್ಗೆ ಹೆಚ್ಚಿನ ಮಾಹಿತಿ ಕೊಡುವ ಪದಗಳು.
ಉದಾ:She is good. 2. The flower is beautiful.

Relating words (preposition) - ವಾಕ್ಯವೊಂದರಲ್ಲಿ ಮುಖ್ಯವಾಗಿ ನಾಮಪದಗಳ ಗುಂಪಿನ ನಡುವೆ ಇರುವ ಸಂಬಂಧವನ್ನು ಸೂಚಿಸುವ ಪದಗಳು.
ಉದಾ: The book is on the table.
The dog is near the chair.

5. Connecting words (conjuctions) -ಎರಡು ಪದಗಳನ್ನು ಅಥವಾ ವಾಕ್ಯಗಳನ್ನು ಕೂಡಿಸುವ ಪದಗಳು.
ಉದಾ: Rama and Laxmana are brothers.
She ran fast but missed the bus.

6. Feeling words (interjection) -  ನಮ್ಮಲ್ಲಿ ಹುಟ್ಟುವ ತೀವ್ರ ಭಾವನೆಗಳನ್ನು ಸೂಚಿಸುವ ಪದಗಳು.
ಉದಾ: Wow, what a beautiful garden!
What a wonderful cup of coffee!

ಇಲ್ಲಿ ನಾವು ಗಮನಿಸಬೇಕಾದ ಒಂದು ಮುಖ್ಯವಾದ ವಿಚಾರವೆಂದರೆ, ವಾಕ್ಯಗಳನ್ನು ರಚಿಸುವಾಗ ಒಂದು ಗುಂಪಿನ ಪದಗಳು ಇನ್ನೊಂದು ಗುಂಪಿನ ಪದಗಳಂತೆ ಕೆಲಸ ಮಾಡುವುದು ಸರ್ವೇಸಾಮಾನ್ಯ.
ಉದಾ:  ‘well’ ಎನ್ನುವ ಪದ ಬಾವಿ ಎಂಬ ಅರ್ಥವುಳ್ಳ noun ಆಗಿಯೂ ‘ಉತ್ತಮ’ ಎಂಬ ಅರ್ಥವುಳ್ಳ adjective ಆಗಿಯೂ ಸಂದರ್ಭಾ ನುಸಾರವಾಗಿ ವರ್ತಿಸುತ್ತದೆ. ಭಾಷೆಯ ಬಳಕೆಯಲ್ಲಿ ಇದರ ಪ್ರಾಮುಖ್ಯತೆಯನ್ನು ಮುಂದೆ ನೋಡೋಣ.

Form and Function in spoken English
ನಮ್ಮ ದಿನನಿತ್ಯದ ಸಂಭಾಷಣೆಯಲ್ಲಿ ಸಾಮಾನ್ಯವಾಗಿ ನಾವು ಉಪಯೋಗಿಸುವ ವಿವಿಧ ರೀತಿಯ ವಾಕ್ಯಗಳೆಂದರೆ, ಹೇಳಿಕೆಗಳು (statements), ಪ್ರಶ್ನೆಗಳು (questions), ಮನವಿಗಳು (requests), ಆದೇಶ/ ಆಜ್ಞಾಪನೆಗಳು (commands), ಉತ್ತಮ ಸಂಭಾಷಣೆಯಲ್ಲಿ, ಈ ವಾಕ್ಯಗಳ ಸ್ವರೂಪ ಮತ್ತು ಕ್ರಿಯೆ (form and function) ಎರಡೂ ಒಂದಕ್ಕೊಂದು ಸಂದರ್ಭಾನುಸಾರವಾಗಿ ಮಿಳಿತ ಗೊಂಡಿರುತ್ತವೆ.

ನಮ್ಮ ದಿನನಿತ್ಯದ ಸಂಭಾಷಣೆಯ ಬಹುಭಾಗ ಹೇಳಿಕೆಗಳಿಂದ ಕೂಡಿರುತ್ತದೆ ಎಂಬುದನ್ನು ನಾವು ಗಮನದಲ್ಲಿಡಬೇಕು. ಅವುಗಳ ರಚನೆಯ ಮೂಲರೂಪ Subject+verb  ಆಗಿರುತ್ತದೆ. ಅವುಗಳ ಜೊತೆಗೆ ಕೆಲವು ಐಚ್ಚಿಕ ಅಂಶಗಳೂ (optional elements) ಇರುತ್ತವೆ. ಅವು ಯಾವುವೆಂದರೆ object  ಅಥವಾ adjective ಅಥವಾ adverb ಆಗಿರಬಹುದು.

ಉದಾ: I (subject) am (verb) fine (adjective).
She (subject) has completed (verb) her work (object).
They (subject) are leaving (verb) today (adverb).

ಇನ್ನು ಪ್ರಶ್ನೆಗಳ ವಿಷಯಕ್ಕೆ ಬಂದರೆ, ನಮ್ಮ ಸಂಭಾಷಣೆಯಲ್ಲಿ ನಾವು ಕೇಳಬಹುದಾದ ಪ್ರಶ್ನೆಗಳು ಎರಡು ರೀತಿಯದ್ದಾಗಿ ರಬಹುದು. ನಾವು ಹೌದು ಅಥವಾ ಇಲ್ಲ ಎಂಬ ಉತ್ತರವನ್ನು ನಿರೀಕ್ಷಿಸುತ್ತಿದ್ದರೆ, yes/ no-questionಅನ್ನು ಕೇಳ ಬೇಕಾಗುತ್ತದೆ. ಹಾಗೆಯೇ, ವಿವರಣಾತ್ಮಕವಾದ ಉತ್ತರವನ್ನು ನಿರೀಕ್ಷಿಸುವಾಗ wh-question ಅನ್ನು ಕೇಳಬೇಕಾಗುತ್ತದೆ. ಯಾವುದೇ ಪ್ರಶ್ನೆಯ ರಚನೆಗೆ ಬೇಕಾಗುವಂತಹ ಮೂಲಾಂಶಗಳು ಹಾಗೂ ಅವುಗಳ ಕ್ರಮವನ್ನು ಗಮನಿಸೋಣ:  verb+subject.
Yes/no-question ಅನ್ನು ಬಳಸುವಾಗ, ನಾವು ನೆನಪಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ, ಆ ಪ್ರಶ್ನೆಗಳು to-be verbs (am, is , are, was, were) ಅಥವಾ to-have verbs (has, have, had) ಅಥವಾ Modals (will, would, shall, should, can, could, may, might, must)ಗಳಿಂದ ಪ್ರಾರಂಭವಾಗುತ್ತವೆ.

ಉದಾ: Am I right?, Have you got it?
May I help you?

ಹಾಗೆಯೇ wh-questions ಬಳಸುವಾಗ, ಪ್ರಶ್ನೆಯು wh-words (what, why, which, when, whose, where, how)ಗಳಿಂದ ಪ್ರಾರಂಭ ವಾಗುತ್ತದೆ. (ಸೂಚನೆ: wh-word ನಿಂದ ಪ್ರಾರಂಭವಾಗುವ ಯಾವುದಾದರೂ ಮೂರು ಪ್ರಶ್ನೆಗಳನ್ನು ನಿಮ್ಮ ಮನಸ್ಸಿನಲ್ಲಿಯೇ ಕೇಳಿಕೊಂಡು, ನಂತರ ಮುಂದೆ ಓದಿ).

wh–ಪದದ ನಂತರ, ಮೇಲೆ ಸೂಚಿಸಿರುವ ಮೂಲಾಂಶಗಳ ಕ್ರಮವನ್ನು (verb+subject) ಅನುಸರಿಸಬೇಕು. ಉದಾ: What is the time?, How are you?, When is your vacation?

ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, ಹೇಳಿಕೆಗಳ ಸ್ವರೂಪವನ್ನು ಪ್ರಶ್ನೆಗಳಿಗೆ ಹೋಲಿಸಿದಾಗ ssubject+verbನ ಸ್ಥಾನಪಲ್ಲಟವಾಗಿರುವುದನ್ನು ಗಮನಿಸಿ:

1. This (subject) is (verb) good?
Is (verb) this (subject) good?
2. You (subject) have completed (verb) the work. 3. Have (verb) you (subject) completed the work?

ಇನ್ನು ಮನವಿಗಳನ್ನು ಮಾಡಿಕೊಳ್ಳುವಾಗ please/ could/can ಎನ್ನುವ ಪದದಿಂದ ವಾಕ್ಯವನ್ನು ಪ್ರಾರಂಭಿಸಬೇಕು. ಉದಾ: Could you please get the book?, Can you please help me cross the road?, Please do this work for me.

ಆದೇಶ/ ಆಜ್ಞಾಪನೆಗಳನ್ನು ಕೊಡುವಾಗ ಉಪಯೋಗಿಸುವ ವಾಕ್ಯಗಳ ಸ್ವರೂಪ ಹೀಗಿರುತ್ತದೆ:
verb+object

ಉದಾ: Close (verb) the door(object).
Complete(verb) your work(object).

ಇಂಗ್ಲಿಷ್‌ ವಾಕ್ಯಗಳ ಅಭ್ಯಾಸವನ್ನು ಯಾಂತ್ರಿಕವಾಗಿ ಮಾಡುವ ಬದಲು ಅವುಗಳ ಸ್ವರೂಪ ಮತ್ತು ಕ್ರಿಯೆಗೆ ಗಮನಕೊಟ್ಟು ಕಲಿತಾಗ ನಮ್ಮ ಭಾಷಾ ಕೌಶಲ ತನಗೆ ತಾನೇ ಅರಳುತ್ತದೆ.

(ಈ ಸರಣಿ ಇಲ್ಲಿಗೆ ಮುಕ್ತಾಯವಾಗುತ್ತದೆ. ತಮ್ಮ ಅನಿಸಿಕೆಗಳನ್ನು ಇ–ಮೇಲ್‌ ಮಾಡಿ, shikshana@prajavani.co.in, ಮಾಹಿತಿಗೆ: 98452 13417

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT