ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರಾ ಹತ್ಯೆ: ನಾಲ್ವರಿಗೆ ಜೀವಾವಧಿ ಶಿಕ್ಷೆ

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಿಹಾರದ ಸಮ­ಷ್ಟಿ­ಪುರ ರೈಲು ನಿಲ್ದಾಣ­ದಲ್ಲಿ 40 ವರ್ಷ­ಗಳ ಹಿಂದೆ ಆಗಿನ ರೈಲ್ವೆ ಸಚಿವ ಲಲಿತ್ ನಾರಾಯಣ ಮಿಶ್ರಾ ಮತ್ತು ಇನ್ನಿಬ್ಬ­ರನ್ನು ಬಾಂಬ್ ಸ್ಫೋಟಿಸಿ ಹತ್ಯೆ ಮಾಡಿದ್ದ ನಾಲ್ವರು ಅಪ­ರಾಧಿ­ಗಳಿಗೆ  ಇಲ್ಲಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ರಂಜನ್ ದ್ವಿವೇದಿ (66), ಸಂತೋಷಾನಂದ್ (75)­,­ ಸುದೇವಾನಂದ್‌ (75) ಮತ್ತು ಗೋಪಾಲಜಿ (73) ವಿರುದ್ಧ  ಹತ್ಯೆ, ಮಾರಕ ಅಸ್ತ್ರಗಳಿಂದ ಗಂಭೀರ ಸ್ವರೂ­ಪದ ಗಾಯ, ಕ್ರಿಮಿನಲ್ ಸಂಚು ಆಪಾದನೆಗಾಗಿ ಐಪಿಸಿಯ ವಿವಿಧ ಕಲಂಗಳಡಿಯಲ್ಲಿ ಪ್ರಕರಣ ದಾಖ­ಲಿಸ­ಲಾಗಿತ್ತು. ಜಿಲ್ಲಾ ನ್ಯಾಯಾಧೀಶ ವಿನೋದ್ ಗೋಯಲ್ ಕಿಕ್ಕಿರಿದ ನ್ಯಾಯಾಲಯದಲ್ಲಿ ನಾಲ್ವ­ರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ತೀರ್ಪು ಪ್ರಕಟಿಸಿದರು.

ಜೀವಾವಧಿ ಜೈಲು ಶಿಕ್ಷೆಯಲ್ಲದೆ ಸಂತೋಷಾನಂದ್ ಮತ್ತು ಸುದೇವಾಂದ್‌ಗೆ ತಲಾ ₨25 ಸಾವಿರಗಳ ದಂಡ ಹಾಗೂ ದ್ವಿವೇದಿ ಮತ್ತು ಗೋಪಾಲಜಿಗೆ ತಲಾ ₨20 ಸಾವಿರಗಳ ದಂಡ ವಿಧಿಸಲಾಗಿದೆ.

ಮಿಶ್ರಾ ಮತ್ತು ಇನ್ನಿಬ್ಬರು ಕಾನೂನು ಬದ್ಧ ಉತ್ತರಾಧಿಕಾರಿಗಳಿಗೆ ತಲಾ ₨5 ಲಕ್ಷಗಳ ಪರಿಹಾರ ನೀಡು­ವಂತೆ ನ್ಯಾಯಾಧೀಶರು ಬಿಹಾರ ಸರ್ಕಾರಕ್ಕೆ ಆದೇಶಿಸಿದ್ದಾರೆ.

ಬಾಂಬ್ ಸ್ಫೋಟದ ಸಂದರ್ಭದಲ್ಲಿ ಗಂಭೀರ­ವಾಗಿ ಗಾಯಗೊಂಡಿದ್ದ ಏಳು ಮಂದಿಯ ಕುಟುಂ­ಬಕ್ಕೆ ತಲಾ ₨1.5 ಲಕ್ಷ ಮತ್ತು ಸಾಧಾರಣ ಗಾಯ­­ಗೊಂಡಿದ್ದ 20 ಜನರ ಕುಟುಂಬಕ್ಕೆ ತಲಾ ₨50 ಸಾವಿರ­ಗಳ ಪರಿಹಾರವನ್ನು ಕಾನೂನು ಸೇವೆಗಳ ವಿಭಾ­ಗದ ಮೂಲಕ ವಿತರಿಸಬೇಕೆಂದು ಆದೇಶಿಸ­ಲಾಗಿದೆ.

ಮುಗ್ಧರಿಗೆ ಶಿಕ್ಷೆ: ಪುತ್ರ ಅತೃಪ್ತಿ
ಪಟ್ನಾ (ಐಎಎನ್‌ಎಸ್‌):
ರೈಲ್ವೆ ಸಚಿವರಾಗಿದ್ದ ನಮ್ಮ ತಂದೆಯ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿ­ದಂತೆ ನಾಲ್ವರು ಮುಗ್ಧರಿಗೆ ಶಿಕ್ಷೆಯಾಗಿದೆ. ಆದ್ದ­ರಿಂದ ಸಿಬಿಐ, ಪ್ರಕರಣವನ್ನು ಮರು ತನಿಖೆ ಮಾಡ­ಬೇಕು ಎಂದು ಎಲ್. ಎನ್. ಮಿಶ್ರಾ ಅವರ ಪುತ್ರ ವಿಜಯ್ ಮಿಶ್ರಾ ಒತ್ತಾಯಿಸಿದ್ದಾರೆ.

ತೀರ್ಪು ನೀಡಿರುವ ನ್ಯಾಯಾಲಯದ ಕ್ರಮ­ವನ್ನು ಪ್ರಶ್ನಿಸುವುದಿಲ್ಲ. ಸಿಬಿಐ ದೋಷಾ­ರೋಪ ಪಟ್ಟಿ ಸಲ್ಲಿಸಿದ ಪ್ರಕಾರ ವಿಚಾರಣೆ ನಡೆಸಲಾಗಿದೆ ಎಂದಿದ್ದಾರೆ.  ಕೊಲೆಯ ಹಿಂದೆ ದೇಶದ ಪ್ರಭಾವಿ ಮುಖಂ­ಡರು ಇದ್ದಾರೆ. ಆದರೆ ಸಿಬಿಐ ಸರಿಯಾಗಿ ತನಿಖೆ ನಡೆಸದೆ ಆನಂದ್ ಮಾರ್ಗ್ ಸಂಘಟನೆ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿತ್ತು ಎಂದು ಅವರು ಆಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT