ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ತಫಾನ ಪೋಷಕರ ವಿಶ್ವಾಸ

ಮಗ ಆರೋಪ ಮುಕ್ತನಾಗಿ ಬರುತ್ತಾನೆ
Last Updated 29 ಜುಲೈ 2014, 20:34 IST
ಅಕ್ಷರ ಗಾತ್ರ

ಬೆಂಗಳೂರು: ‘ಪೊಲೀಸರು ವಿನಾಕಾರಣ ಮಗನನ್ನು ಬಂಧಿಸಿ­ದ್ದಾರೆ. ನಿರಪರಾಧಿಯಾದ ಆತ ಖಂಡಿತ ಆರೋಪ ಮುಕ್ತ­ನಾಗಿ ಬರುತ್ತಾನೆ’ ಎಂದು ಮುಸ್ತಫಾನ ಪೋಷಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಬ್ಗಯೊರ್‌ ಶಾಲಾ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕ­ರಣದ ಮುಖ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ ನಂತರ ‘ಪ್ರಜಾವಾಣಿ’ ಜತೆ ಮಾತನಾಡಿದ ಮುಸ್ತಫಾನ ತಾಯಿ ಜಹಿರಾ ಅವರು, ‘ಮಗ ಅತ್ಯಾಚಾರದಂತಹ ದುಷ್ಕೃತ್ಯ ಎಸಗಲು ಸಾಧ್ಯವೇ ಇಲ್ಲ’ ಎಂದರು.

‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಗ­ನನ್ನು ಪತಿ ಮತ್ತು ನಾನು ಬೆಳಿಗ್ಗೆ ಭೇಟಿಯಾದೆವು. ಮಾಡದ ತಪ್ಪಿಗೆ ಜೈಲು ಸೇರಿರುವ ಆತ ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋಗಿದ್ದಾನೆ. ಘಟನೆಯಿಂದ ಬೇಸರಗೊಂಡಿರುವ ಆತ ಸರಿಯಾಗಿ ಮಾತನಾಡಲಿಲ್ಲ’ ಎಂದು ತಿಳಿಸಿದರು.

ಕುಟುಂಬದ ಆಧಾರವಾಗಿದ್ದ ಮಗನನ್ನು ಪೊಲೀಸರು ಬಂಧಿ­ಸಿ­ರುವುದರಿಂದ ಜೀವನ ನಿರ್ವಹಣೆಗೆ ತೊಂದರೆ­ಯಾಗಿದೆ. ಇದರಿಂದಾಗಿ ಪತಿ ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ಜಹಿರಾ ಅಳಲು ತೋಡಿಕೊಂಡರು.

ಬ್ಯಾಡ್ಜ್‌ ಕಡ್ಡಾಯ: ಶಾಲಾ ವಾಹನ ಚಾಲಕರು ಮತ್ತು ವಾಹ­ನಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಕೆಲಸದ ಅವಧಿ­ಯಲ್ಲಿ ಶಾಲೆಯ ವಿವರವುಳ್ಳ ಬ್ಯಾಡ್ಜ್‌ ಧರಿಸುವುದು ಕಡ್ಡಾಯ ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಲಾ ವಾಹನ ಚಾಲಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಬ್ಯಾಡ್ಜ್‌ ಧರಿಸಬೇಕೆಂದು ಸಾರಿಗೆ ಇಲಾ­ಖೆ­ಯು 2013ರ ಸುರಕ್ಷತಾ ಮಾರ್ಗಸೂಚಿಯಲ್ಲಿ ತಿಳಿಸಿದೆ’ ಎಂದು ಹೇಳಿದರು.

ಬ್ಯಾಡ್ಜ್‌ ಧರಿಸದ ಚಾಲಕರು ಮತ್ತು ಸಿಬ್ಬಂದಿಯ ಬಗ್ಗೆ ಪೋಷಕರು ಹಾಗೂ ಸಾರ್ವಜನಿಕರು ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬಹುದು.
ಆ ಮಾಹಿತಿ ಆಧರಿಸಿ ಶಾಲಾ ಸಿಬ್ಬಂದಿ ಮತ್ತು ಚಾಲಕರ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು  ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT