ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನವೇ ಕಲಾಪ ಮುಂದೂಡಿಕೆ

ನೂತನ ಲೋಕಸಭೆ: ಮುಂಡೆ ನಿಧನಕ್ಕೆ ಸಂತಾಪ
Last Updated 4 ಜೂನ್ 2014, 19:33 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್ಎಸ್): ಹೊಸ ಸಂಸತ್‌ನ ಮೊತ್ತಮೊದಲ ಅಧಿ­ವೇಶ­ನದ ಪ್ರಪ್ರಥಮ ಕಲಾಪಕ್ಕೆ ಕೇಂದ್ರ ಸಚಿವ­ರಾಗಿದ್ದ ಗೋಪಿನಾಥ್‌ ಮುಂಡೆ ಅವರ ದುರಂತ ಸಾವಿನಿಂದಾಗಿ ಸೂತ­ಕದ ಛಾಯೆ ಕವಿದಿತ್ತು.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿ ನಾಥ್‌ ಮುಂಡೆ ಅವರಿಗೆ ಬುಧವಾರ ಆರಂಭಗೊಂಡ ಮೊದಲ ಅಧಿವೇಶನ­ದಲ್ಲಿ ಸಂತಾಪ ಸೂಚಿಸಲಾಯಿತು. ಬಳಿಕ ಕಲಾಪವನ್ನು ಒಂದು ದಿನಕ್ಕೆ ಮುಂದೂಡಲಾಯಿತು.

‘ದೇಶದ ಜನರ ಕ್ಷೇಮಾಭಿವೃದ್ಧಿಯ ಗುರುತರ ಜವಾಬ್ದಾರಿ ನೂತನ ಲೋಕಸಭೆಯ ಮೇಲಿದೆ’ ಎಂದು ಹಂಗಾಮಿ ಸ್ಪೀಕರ್‌್ ಕಮಲ್‌ನಾಥ್‌ ಹೇಳಿದರು.

16ನೇ ಲೋಕಸಭೆಗೆ ಆಯ್ಕೆಯಾದ ಸದಸ್ಯರ ಪಟ್ಟಿಯನ್ನು ಲೋಕಸಭೆ ಮಹಾಕಾರ್ಯದರ್ಶಿ ಪಿ.ಶ್ರೀಧರನ್‌್ ಓದಿ ಹೇಳಿದರು. ನೂತನ ಸದಸ್ಯರು ಗುರುವಾರ ಪ್ರಮಾಣವಚನ ಸ್ವೀಕರಿ­ಸಲು ಒಪ್ಪಿಕೊಂಡಾಗ ಕಲಾಪವನ್ನು ಒಂದು ದಿನಕ್ಕೆ ಮುಂದೂಡಲಾಯಿತು.

ಇದಕ್ಕೂ ಮುನ್ನ, ಮುಂಡೆ ಅವರ ಗೌರವಾರ್ಥ ಎರಡು ನಿಮಿಷ ಮೌನ ಆಚರಿಸಲಾಯಿತು.
ನೂತನ ಲೋಕಸಭೆ ಅಧಿವೇಶನ ಶುರು­ವಾದ ದಿನವೇ ಮುಂದೂಡಿಕೆ­ಯಾ­ಗಿದ್ದು ಇದೇ ಮೊದಲು ಎನ್ನುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT