ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಹಂತದಲ್ಲಿ ಶೇ 57ರಷ್ಟು ಮತದಾನ

ಬಿಹಾರ ವಿಧಾನಸಭೆ ಚುನಾವಣೆ
Last Updated 12 ಅಕ್ಟೋಬರ್ 2015, 13:44 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ): ಬಿಹಾರ ವಿಧಾನಸಭೆಗೆ ಮೊದಲ ಹಂತದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಶೇಕಡ 57ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

10 ಜಿಲ್ಲೆಗಳಲ್ಲಿ ವ್ಯಾಪಿಸಿರುವ 49 ವಿಧಾನಸಭೆ ಕ್ಷೇತ್ರಗಳಲ್ಲಿ ಕೆಲ ಅಹಿತಕರ ಘಟನೆಗಳನ್ನು ಹೊರತು ಪಡಿಸಿದರೆ ಇನ್ನುಳಿದಂತೆ ಮತದಾನ ಶಾಂತವಾಗಿತ್ತು.

ನಕ್ಸಲ್ ಉಪಟಳದ ಕ್ಷೇತ್ರಗಳಾದ ತಾರಾಪುರ,ಜಮಾಲಪುರ, ಸೂರ್ಯಗ್ರಹ, ರಜೌಲಿ (ಎಸ್‌ಸಿ), ಗೋವಿಂದಪುರ, ಸಿಕಂದರ್ (ಎಸ್.ಸಿ), ಜಮುಯಿ, ಝಾಝಾ ಹಾಗೂ ಚಕೈಗಳಲ್ಲಿ ಮಧ್ಯಾಹ್ನ 3ಗಂಟೆಗೆ ಮತದಾನ ಅಂತ್ಯಗೊಂಡಿತು.

ಇನ್ನು, ನಿಗದಿಯಂತೆ ಅಲೌಲಿ (ಎಸ್.ಸಿ), ಬೆಲ್ದೌರ್, ಕಟೋರಿಯಾ (ಎಸ್‌.ಟಿ), ಬೆಲ್ಹಾರ್ ಕ್ಷೇತ್ರಗಳಲ್ಲಿ ಸಂಜೆ 4 ಗಂಟೆಗೆ ಮತದಾನ ಮುಕ್ತಾಯಗೊಂಡಿತು. ಇನ್ನುಳಿದ 36 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಗೆ ಮತದಾನ ಅಂತ್ಯ ಕಂಡಿದೆ.

ಮೊದಲ ಹಂತದ ಚುನಾವಣೆಯಲ್ಲಿ 54 ಮಹಿಳೆಯರು ಸೇರಿದಂತೆ 583 ಅಭ್ಯರ್ಥಿಗಳು ಕಣದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT