ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಹರಂ: ಹುಲಿವೇಷದ ಆಕರ್ಷಣೆ

Last Updated 1 ನವೆಂಬರ್ 2014, 7:18 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಮೊಹರಂ ಹಬ್ಬ ಬಂದರೆ ಸಾಕು ಎಲ್ಲೆಲ್ಲೂ ಹುಲಿವೇಷಗಳ ಧಾರಿಗಳ ದರ್ಬಾರ್‌ ಆರಂಭವಾಗುತ್ತದೆ. ಪಂಜಾಗಳಿಗೆ ಹರಕೆ ಹೊತ್ತವರು ಈ ರೀತಿ ಹುಲಿವೇಷ ಮೈಮೇಲೆ ಬರೆಸಿಕೊಂಡು ಹರಕೆ ತೀರಿಸುತ್ತಾರೆ. ಬಾಲಕರಿಂದ ವೃದ್ಧರೂ ಬರೆಸಿಕೊಳ್ಳುತ್ತಾರೆ. ಪಂಜಾ (ದೇವರು) ಪ್ರತಿಷ್ಠಾಪನೆಯಾಗುವ ಆರಂಭದ ದಿನ­­­ದಿಂದ ಐದು ದಿನಗಳವರೆಗೆ ಹುಲಿವೇಷ ಬರೆಸಿಕೊಂಡವರು ಊರಲ್ಲಿ ತಿರುಗಾಡಿ ಅಂಗ­ಡಿಗಳ ಮಾಲೀಕರಿಂದ ಹಾಗೂ ಪರಿ­ಚಯಸ್ಥರಿಂದ ಹಣ ಪಡೆಯುವುದು ವಾಡಿಕೆ.

‘ಮಗನಿಗೆ ಹುಲಿವೇಷ ಬರೆಸುತ್ತೇವೆ ಎಂದು ಬೇಡಿಕೊಂಡಿದ್ದೆವು. ಅದರಂತೆ ಮೂರು ವರ್ಷಗಳಿಂದ ಮಗನಿಗೆ ಹುಲಿವೇಷ ಬರೆ­ಸುತ್ತಿ­ದ್ದೇವೆ’ ಎಂದು ಸೋಮಣ್ಣ ಯತ್ನಳ್ಳಿ ಹೇಳುತ್ತಾರೆ.

ಹುಲಿವೇಷ ಬರೆಸಿಕೊಂಡವರು ಐದು ದಿನಗಳ ತನಕ ಹಲಿಗೆ ವಾದ್ಯದ ತಾಳಕ್ಕೆ ಹುಲಿಯಂತೆ ಕುಣಿಯುತ್ತಾರೆ. ಈ ಕುಣಿತ ನೋಡುವುದೇ ಮಕ್ಕಳಿಗೆ ಒಂದು ಭಾಗ್ಯ.

ಒಬ್ಬರು ಒಂದು ಹಲಿಗೆ ಬಾರಿಸುವವನನ್ನು ನೇಮಿಸಿಕೊಂಡರೆ ಆರ್ಥಿಕ­ವಾಗಿ ಸ್ಥಿತಿವಂತರಾದವರು ಎರಡಕ್ಕಿಂತ ಹೆಚ್ಚು ಹಲಿಗೆ ಬಾರಿಸುವವರನ್ನು ನೇಮಿಸಿಕೊಳ್ಳುತ್ತಾರೆ. ಐದು ದಿನಗಳವರೆಗೆ ಊರಲ್ಲಿ ಹಲಿಗೆ ಸದ್ದು ತುಂಬಿ­ಕೊಳ್ಳುತ್ತದೆ.
ಅಂದಾಜು ಮೂರುವರೆ ದಶಕಗಳ ಹಿಂದೆ ಪಟ್ಟಣದ ಕೆಇಬಿಯಲ್ಲಿ ನೌಕರಿ ಮಾಡುತ್ತಿದ್ದ ಹಾವೇರಿ ಮೂಲದ ಮಹಾದೇವಪ್ಪ ಎಂಬು­ವವರು ಒಂದೇ ಬಾರಿಗೆ ಹನ್ನೆರಡು ಹಲಿಗೆ ಬಾರಿ­ಸುವವರನ್ನು ನೇಮಿಸಿಕೊಂಡು ಹಲಿಗೆಗಳ ನಾದಕ್ಕೆ ತಕ್ಕಂತೆ ಸೊಗಸಾಗಿ ಕುಣಿಯುತ್ತಿದ್ದುದನ್ನು ಇನ್ನೂ ಪಟ್ಟಣದ ಜನತೆ ಮರೆತಿಲ್ಲ. ಮೊಹರಂ ಬಂದಾ­ಕ್ಷಣ ಲಕ್ಷ್ಮೇಶ್ವರದ ಜನತೆಗೆ ಈಗಲೂ ಹಾವೇರಿ ಮಹಾ­ದೇವಪ್ಪನ ನೆನಪಾಗುತ್ತದೆ.

‘ಮಾದೇವಪ್ಪ ಹಾವೇರಿ ಹನ್ನೆರಡು ಹಲಿಗೆಗಳ ನಾದಕ್ಕೆ ತಕ್ಕಂತೆ ಕುಣಿಯುವುದನ್ನು ನೋಡು­ವುದೇ ನಮಗೆಲ್ಲ ಹಬ್ಬವಾಗಿತ್ತು. ಅಷ್ಟೊಂದು ಭರ್ಜರಿಯಾಗಿತ್ತು ಅವನ ಕುಣಿತಾ’ ಎಂದು ಹೆಸ್ಕಾಂನ ನಿವೃತ್ತ ನೌಕರ ಹಾಗೂ ಶಾರದಾ ಸಂಗೀತ ಕಲಾ ಬಳಗದ ಅಧ್ಯಕ್ಷ ನಾಗನಗೌಡ ಚಿಕ್ಕಣ್ಣವರ ನೆನಪಿಸಿಕೊಳ್ಳುತ್ತಾರೆ.

ಹುಲಿವೇಷ ಬರೆಯುವುದರಲ್ಲಿ ಮನೋಹರ ಬಹಳ ಸಿದ್ಧರು. ಲಕ್ಷ್ಮೇಶ್ವರ ಸೇರಿದಂತೆ ಸುತ್ತ­ಮುತ್ತಲಿನ ಕುಂದಗೋಳ, ಸವಣೂರು ತಾಲ್ಲೂಕು­ಗಳಿಂದ ಹುಲಿವೇಷ ಬರೆಸಿಕೊಳ್ಳಲು ಇವರ ಹತ್ತಿರ ಬರುತ್ತಾರೆ.

ಐದು ದಿನಗಳವರೆಗೆ ಮನೋಹರ್‌ ಅವರಿಗೆ ಬಿಡುವಿಲ್ಲದ ಕೆಲಸ. ಹೆಂಡತಿ ಹಾಗೂ ಮಕ್ಕಳು ಹುಲಿವೇಷ ಬರೆಯುವ ಕಾಯಕದಲ್ಲಿ ತೊಡಗುತ್ತಾರೆ. ಈ ವರ್ಷವೂ ಸಹ ಮೊಹರಂ ಬಂದಿದ್ದು ಈಗಾಗಲೇ ಇವರ ಹತ್ತಿರ ಹುಲಿವೇಷ ಬರೆಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT