ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಅಮೆರಿಕ ಕೋರ್ಟ್‌ ಸಮನ್ಸ್‌

Last Updated 26 ಸೆಪ್ಟೆಂಬರ್ 2014, 10:31 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): 2002ರ ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಅಮೆರಿಕದ ಫೆಡರಲ್‌ ಕೋರ್ಟ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.

ನರೇಂದ್ರ ಮೋದಿ ಅವರು ಐದು ದಿನಗಳ ಅಮೆರಿಕ ಪ್ರವಾಸ ಪ್ರಾರಂ­ಭಿಸಿ­ರುವ ಬೆನ್ನಲ್ಲೇ ಈ ಸಮನ್ಸ್‌ ಜಾರಿಗೊಂಡಿರುವುದು ಮಹತ್ವ ಪಡೆದುಕೊಂಡಿದೆ.

‘ಗುರುವಾರ ಸಮನ್ಸ್‌ ನೀಡಲಾಗಿದೆ.  21 ದಿನಗಳ ಒಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಈ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಕಾನೂನು ಸಚಿವ ರವಿ ಶಂಕರ್‌ ಪ್ರಸಾದ್‌ ಪ್ರತಿಕ್ರಿಯಿಸಿದ್ದಾರೆ.

ನ್ಯೂಯಾರ್ಕ್‌ ಮೂಲದ ಮಾನವ ಹಕ್ಕುಗಳ ಸಂಸ್ಥೆ ಅಮೆರಿಕನ್‌ ಜಸ್ಟೀಸ್‌ ಸೆಂಟರ್‌ (ಎಜೆಸಿ) ಮತ್ತು ಗುಜರಾತ್‌ ಗಲಭೆಯಲ್ಲಿ ಬದುಕುಳಿದ ಇಬ್ಬರು  ವ್ಯಕ್ತಿಗಳು ಮೋದಿ ವಿರುದ್ಧ ಕೋರ್ಟ್‌ ಮೊರೆ ಹೋಗಿದ್ದರು.

‘ಎಜೆಸಿ’ ಸಲ್ಲಿಸಿರುವ 28 ಪುಟಗಳ ದೂರಿನಲ್ಲಿ 2002ರ ಗುಜರಾತ್‌ ಕೋಮುದಳ್ಳುರಿ ಸಂಘಟಿತ ಅಪರಾಧ. ಇದರ ಹಿಂದೆ ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ವ್ಯವಸ್ಥಿತ ಕೈವಾಡ ಇದೆ. ಇಡೀ ಮನುಕುಲ ವಿರೋಧಿಯಾಗಿ ಅವರು ಅಪರಾಧ ಎಸಗಿದ್ದಾರೆ ಎನ್ನಲಾಗಿದೆ.

ನರೇಂದ್ರ ಮೋದಿ ಅವರು ಸೆ.29 ಮತ್ತು 30ರಂದು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿ­ದ್ದಾರೆ. ಇದೇ ವೇಳೆ, ಮೋದಿ ವಿರೋಧಿ ಸಂಘಟನೆಗಳು ನ್ಯೂಯಾರ್ಕ್‌ ಮತ್ತು ವಾಷಿಂಗ್ಟನ್‌ನಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT