ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಹಿಂದಿಕ್ಕಿದ ಕೇಜ್ರಿವಾಲ್‌

‘ಟೈಮ್‌’ ನಿಯತಕಾಲಿಕ ಪ್ರಭಾವಿಗಳ ಪಟ್ಟಿ
Last Updated 23 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ‘ಟೈಮ್‌’ ನಿಯ­­ತ­ಕಾಲಿ­ಕ ನಡೆಸಿದ ಓದುಗರ ಆನ್‌ಲೈನ್‌ ಮತಗಣನೆ­ಯಲ್ಲಿ ಜಗತ್ತಿನ 100 ಅತ್ಯಂತ ಪ್ರಭಾವಿ­ಗಳ ಪಟ್ಟಿ­ಯಲ್ಲಿ ಆಮ್‌ ಆದ್ಮಿ ಪಕ್ಷದ ಸಂಸ್ಥಾ­ಪಕ ಅರವಿಂದ ಕೇಜ್ರಿವಾಲ್‌ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಅಮೆರಿಕದ ಗಾಯಕಿ ಕ್ಯಾಟಿ ಪೆರಿ ಅವರನ್ನು ಹಿಂದಿಕ್ಕಿದ್ದಾರೆ.

ಭಾರತದ ದೀರ್ಘಾವಧಿಯ ಸಾರ್ವ­ತ್ರಿಕ ಚುನಾ­ವಣೆ ಪೂರ್ಣಗೊಳ್ಳಲು ಇನ್ನೂ ಮೂರು ವಾರ ಬಾಕಿ ಇರು­ವಾಗ ಭಾರ­ತದ ರಾಜಕಾರಣಿಗಳು ಪ್ರಭಾವಿ­ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿ­ದ್ದಾರೆ. ಅತಿ ಹೆಚ್ಚು ಶೇಕಡಾವಾರು ಜನರು ಕೇಜ್ರಿವಾಲ್‌ ಪರ­ವಾಗಿ ‘ಹೌದು’ ಮತ­ಗಳನ್ನು ಚಲಾಯಿಸಿ­ದ್ದಾರೆ.

ಮಂಗಳವಾರ ಬೆಳಿಗ್ಗೆವರೆಗೆ ಸುಮಾರು 31.68 ಲಕ್ಷ ಜನರು ಕೇಜ್ರಿವಾಲ್‌ (45) ಅವ­ರಿಗೆ ಮತ ನೀಡಿದ್ದಾರೆ. ಆದರೆ ಮೋದಿ (63) ಅವರಿಗೆ 50.75 ಲಕ್ಷಕ್ಕೂ ಅಧಿಕ ಜನ ಮತ ಹಾಕಿದ್ದಾರೆ.   ಈವ­ರೆಗೆ ಕೇಜ್ರಿವಾಲ್‌ ಶೇ 71.5 ‘ಹೌದು’ ಮತ ಮತ್ತು ಶೇ 28.5 ‘ಇಲ್ಲ’ ಮತ­ಗಳನ್ನು ಪಡೆದಿದ್ದಾರೆ. ಮೋದಿ ಶೇ 49.7 ‘ಹೌದು’ ಮತ್ತು ಶೇ 50.3 ‘ಇಲ್ಲ’ ಮತ ಗಳಿಸಿದ್ದಾರೆ.

ಇತರ ಎಲ್ಲ ಪ್ರಭಾವಿಗಳಿಗಿಂತಲೂ ಅತಿ ಹೆಚ್ಚಿನ ‘ಇಲ್ಲ’ ಮತ­ಗಳನ್ನು ಗಳಿಸಿ­ರುವ­ ಮೋದಿ, ಪ್ರಸಿದ್ಧ ಗಾಯಕರಾದ ಕ್ಯಾಟಿ ಪೆರಿ ಮತ್ತು ಜಸ್ಟಿನ್‌ ಬೀಬರ್‌ ಅವರನ್ನು ಮೀರಿಸಿದ್ದಾರೆ. ಕೇಜ್ರಿವಾಲ್‌ ಮತ್ತು ಮೋದಿ ಅವರ ನಂತರದ ಸ್ಥಾನವನ್ನು ಈಜಿಪ್ಟ್ ಸೇನಾ ಕಮಾಂಡರ್‌ ಅಬ್ದುಲ್‌ ಫತಾಹ್‌ ಅಲ್‌ ಸೈಸಿ ಪಡೆದಿದ್ದಾರೆ. ಕಾಂಗ್ರೆಸ್‌ ಉಪಾ­ಧ್ಯಕ್ಷ ರಾಹುಲ್‌ ಗಾಂಧಿ (43) ಅವರು 96,070 ಮತಗಳೊಂದಿಗೆ ಪಟ್ಟಿಯಲ್ಲಿ 40ನೇ ಸ್ಥಾನ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT