ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಪಿಎಸ್‌ಸಿ ಗೊಂದಲ: ಮೋದಿಗೆ ಅಖಿಲೇಶ್‌ ಪತ್ರ

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಯುಪಿಎಸ್‌ಸಿ ಪರೀಕ್ಷಾ ಗೊಂದಲವನ್ನು ಬಗೆಹರಿಸಲು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿ ಲೇಶ್‌ ಯಾದವ್‌ ಪತ್ರ ಬರೆದಿದ್ದಾರೆ.

ಸಮಾನತೆ ತತ್ವದ ಆಧಾರದಲ್ಲಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಮತ್ತು ಸಾಮರ್ಥ್ಯ ಪರೀಕ್ಷೆಗೆ ಹೊಸ ಮಾದರಿಯನ್ನು ಪರಿಗಣಿಸು ವಂತೆ ಅವರು ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶದಿಂದ ಹಿಂದಿಯನ್ನು ಪ್ರಥಮ ಭಾಷೆಯನ್ನಾಗಿರಿಸಿಕೊಂಡ ಭಾರಿ ಸಂಖ್ಯೆಯ ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆ ಬರೆಯು ತ್ತಿದ್ದಾರೆ ಎಂದು ಹೇಳಿದ ಅವರು ಆದರೆ ಸಿಸ್ಯಾಟ್‌ನಲ್ಲಿ ಪ್ರಶ್ನೆ ಗಳನ್ನು ಹಿಂದಿ ಮತ್ತು ಇತರ ಭಾಷೆಗಳಿಗೆ ಸಾಫ್ಟ್‌ವೇರ್‌ ಒಂದರ ಮೂಲಕ ಅನುವಾದ ಮಾಡಲಾ ಗುತ್ತಿದೆ. ಇದರಿಂದ ಅವುಗಳು ಮೂಲ ಅರ್ಥ ಕಳೆದುಕೊಂಡು ವಿದ್ಯಾರ್ಥಿ ಗಳಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT