ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುರೋಪಿಯನ್‌ ಲೀಗ್‌ಗೆ ಗುರ್‌ಪ್ರೀತ್‌

Last Updated 1 ಜುಲೈ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಫುಟ್‌ಬಾಲ್‌ ಆಟಗಾರ ಗುರ್‌ಪ್ರೀತ್‌ ಸಿಂಗ್‌ ಸಂಧು ಅವರು ಯುರೋಪಿಯನ್‌ ಫುಟ್‌ಬಾಲ್‌ ಲೀಗ್‌ನಲ್ಲಿ ಆಡಲಿದ್ದಾರೆ. ಈ ಮೂಲಕ  ಈ ಲೀಗ್‌ನಲ್ಲಿ ಆಡುತ್ತಿರುವ ಭಾರತದ ಮೊದಲ ಆಟಗಾರ ಎಂಬ ದಾಖಲೆಗೆ ಗುರ್‌ಪ್ರೀತ್‌ ಪಾತ್ರರಾಗಿದ್ದಾರೆ.

ಆರು ಅಡಿ, ನಾಲ್ಕು ಇಂಚು ಎತ್ತರವಿರುವ ಗುರ್‌ಪ್ರೀತ್‌ ಅವರು ಭಾರತ ತಂಡದ ಗೋಲ್‌ ಕೀಪರ್‌ ಆಗಿ ಹಲವು ಪಂದ್ಯಗಳಲ್ಲಿ ಆಡಿದ್ದಾರೆ. ನಾರ್ವೆಯ ಸ್ಟೆಬೇಕ್‌ ಕ್ಲಬ್‌ ಪರ ಆಡುವ ಮೂಲಕ ಫುಟ್‌ಬಾಲ್‌ ಕ್ರೀಡೆಗೆ ಪದಾರ್ಪಣೆ ಮಾಡಿದ್ದ ಗುರ್‌ಪ್ರೀತ್‌ ಗುರುವಾರ ನಡೆದಿದ್ದ ಯುರೋಪಿಯನ್‌ನ ಲೀಗ್‌ನ ಪಂದ್ಯದಲ್ಲಿ ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT