ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಕರ್ಮಿ ಸಿ. ಆರ್. ಸಿಂಹ ವಿಧಿವಶ

Last Updated 28 ಫೆಬ್ರುವರಿ 2014, 10:27 IST
ಅಕ್ಷರ ಗಾತ್ರ

ಬೆಂಗಳೂರು : ಹಿರಿಯ ರಂಗಕರ್ಮಿ, ಬಹುಮುಖ ಪ್ರತಿಭೆಯ ಕಲಾವಿದ ಸಿ. ಆರ್. ಸಿಂಹ  ಬೆಂಗಳೂರಿನ ಬನಶಂಕರಿ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದರು.

72 ವರ್ಷದ ಅವರು ರಂಗಭೂಮಿ, ದೂರದರ್ಶನ ಹಾಗೂ ಚಲನಚಿತ್ರ  ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಸಿಂಹ ಅವರು 1942ರಲ್ಲಿ ಚನ್ನಪಟ್ಟಣದಲ್ಲಿ ಜನಿಸಿದರು. ಇವರ ತಂದೆ ರಾಮಸ್ವಾಮಿ ಶಾಸ್ತ್ರಿ, ತಾಯಿ  ಲಲಿತಮ್ಮ. 'ಪ್ರಣಯರಾಜ' ಎಂದೇ ಹೆಸರಾದ ಚಿತ್ರ ನಟ ಶ್ರೀನಾಥ್ ಅವರು ಸಿಂಹ ಅವರ ಸಹೋದರ.

ಬನಶಂಕರಿಯ ರಿಂಗ್ ರಸ್ತೆಯಲ್ಲಿ 23 ವರ್ಷಗಳ ಹಿಂದೆ ನಿರ್ಮಿಸಿದ್ದ ಅವರ ಮನೆ 'ಸಿಂಹ ಗುಹೆ' ಕೂಡಾ ಅವರಷ್ಟೇ ಖ್ಯಾತ.

ಸಿ. ಆರ್. ಸಿಂಹ ಅವರು ಉತ್ತಮ ಕಲಾವಿದರಷ್ಟೇ ಅಲ್ಲ, ಉತ್ತಮ ನಿರ್ದೇಶಕರೂ ಹೌದು. ಶೇಕ್ಸ್ ಪಿಯರ್ ನ ಒಥೆಲೊ, ಮಿಡ್ ಸಮ್ಮರ್  ನೈಟ್ಸ್ ಡ್ರೀಮ್ ನಾಟಕಗಳನ್ನು ಮತ್ತು ಕಾಕನಕೋಟೆ, ಶಿಕಾರಿ, ಅಶ್ವಮೇಧ, ಅಂಗೈಯಲ್ಲಿ ಅಪ್ಸರೆ ಚಲನಚಿತ್ರಗಳನ್ನೂ ನಿರ್ದೇಶಿಸಿದ್ದಾರೆ.

ಅಭಿನಯದ ನಾಟಕಗಳು
* ದಿ ಜೂ ಸ್ಟೋರಿ
* ಸೂರ್ಯ ಶಿಕಾರಿ
* ದಿ ಆಡ್ ಕಪಲ್
* ಮ್ಯಾನ್ ಆಫ್ ಡೆಸ್ಟಿನಿ
* ತುಘಲಕ್
* ಸಂಕ್ರಾಂತಿ

ಅಭಿನಯದ ಚಿತ್ರಗಳು
* ಸಂಸ್ಕಾರ
* ಸಂಕಲ್ಪ
* ಚಿತೆಗೂ ಚಿಂತೆ
* ಬರ
* ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು

ಸಂದ ಪ್ರಶಸ್ತಿಗಳು
* ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ
* ಕಾಕನಕೋಟೆ ಚಲನಚಿತ್ರಕ್ಕೆ ರಾಜ್ಯ ಪ್ರಶಸ್ತಿ
* ರಾಜ್ಯೋತ್ಸವ ಪ್ರಶಸ್ತಿ
* ಕೇಂದ್ರ ಸಾಹಿತ್ಯ ನಾಕಟ ಅಕಾಡೆಮಿ
* ಶಂಕರಗೌಡ ರಂಗಭೂಮಿ
* ಆರ್ಯಭಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT