ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ, ಜೋಳಕ್ಕೆ ಪ್ರೋತ್ಸಾಹ ಧನ

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ
Last Updated 26 ನವೆಂಬರ್ 2015, 19:37 IST
ಅಕ್ಷರ ಗಾತ್ರ

ಬೆಂಗಳೂರು: ರಾಗಿ, ಜೋಳ ಮತ್ತು ಭತ್ತಕ್ಕೆ ಕೇಂದ್ರ ಸರ್ಕಾರ  2015–16ನೇ ಸಾಲಿಗೆ ಬೆಂಬಲ ಘೋಷಿಸಿದ್ದು, ಅದರ ಜತೆಗೆ ಹೆಚ್ಚುವರಿಯಾಗಿ  ರಾಜ್ಯ ಸರ್ಕಾರವೂ ಪ್ರೋತ್ಸಾಹ ಧನ ನೀಡಲು ಗುರುವಾರದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕ್ವಿಂಟಲ್‌ ಸಾಮಾನ್ಯ ಭತ್ತಕ್ಕೆ ಕೇಂದ್ರ ಸರ್ಕಾರ ₹1,410 ನಿಗದಿಪಡಿಸಿದೆ. ಅದಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ₹100 ನೀಡಲಿದೆ. ಬಿಳಿ ಜೋಳಕ್ಕೆ (ಮಾಲ್ದಂಡಿ) ಕೇಂದ್ರ ಸರ್ಕಾರ ₹1,590 ನಿಗದಿಪಡಿಸಿದೆ. ಅದಕ್ಕೆ ರಾಜ್ಯ ಸರ್ಕಾರ ₹450 ಹೆಚ್ಚುವರಿಯಾಗಿ ನೀಡಲಿದ್ದು, ಒಟ್ಟು ₹2040ಕ್ಕೆ ರೈತರಿಂದ ಖರೀದಿಸಲಿದೆ.

ಕಳೆದ ವರ್ಷ ಈ ಜೋಳವನ್ನು ₹2,300ಕ್ಕೆ ಖರೀದಿ ಮಾಡಲಾಗಿತ್ತು. ಈ ಬಾರಿ ಹೆಚ್ಚು ಬೆಳೆ ಬಂದ ಕಾರಣ ಖರೀದಿ ದರ ಇಳಿಸಲಾಗಿದೆ. ರಾಗಿಗೆ ಕೇಂದ್ರ ಸರ್ಕಾರ ₹1,650 ನಿಗದಿಪಡಿಸಿದೆ. ಅದಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ₹450 ನೀಡಲಿದೆ. ಇದನ್ನೂ ₹2,100 ಕೊಟ್ಟು ರೈತರಿಂದ ಖರೀದಿಸಲು ತೀರ್ಮಾನಿಸಲಾಗಿದೆ.
*
ಇತರ ಪ್ರಮುಖ ತೀರ್ಮಾನಗಳು
* ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ 15 ‘ಸಿ’ ವರ್ಗದ ಗಣಿಗಳಲ್ಲಿನ ಕಬ್ಬಿಣದ ಅದಿರು ಪತ್ತೆಗೆ ಕೇಂದ್ರ ಸರ್ಕಾರದ ಖನಿಜ ಶೋಧ ನಿಗಮಕ್ಕೆ (ಎಂಇಸಿಎಲ್‌) ವಹಿಸಲು ತೀರ್ಮಾನ. ಈ ಸಲುವಾಗಿ ನಿಗಮಕ್ಕೆ ₹82.35 ಕೋಟಿ ಕೊಟ್ಟು, ಅದರ ಜತೆ ಒಡಂಬಡಿಕೆ. ನಿಗಮವು   ಸೂಚಿತ ಗಣಿಗಳಲ್ಲಿ ಎಷ್ಟು ಪ್ರಮಾಣದ ಮತ್ತು ಯಾವ ಗುಣಮಟ್ಟದ   ಅದಿರು ಸಿಗುತ್ತದೆ ಎಂಬುದನ್ನು ಪತ್ತೆಹಚ್ಚಿ ಸರ್ಕಾರಕ್ಕೆ ವರದಿ ನೀಡಲಿದೆ. ಬಳಿಕ ಅಂತಹ ಗಣಿ ಪ್ರದೇಶಗಳನ್ನು ಸರ್ಕಾರ ಹರಾಜು ಹಾಕಲಿದೆ.

*ಪ್ರವಾಸೋದ್ಯಮ ನೀತಿಯ ಪ್ರಕಾರ  ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡುವವರಿಗೆ ಮುದ್ರಾಂಕ ಶುಲ್ಕದಿಂದ ವಿನಾಯಿತಿ

* ಮೈಸೂರಿನ ವರುಣಾ ಹೋಬಳಿಯ ಚೋರನಹಳ್ಳಿಯಲ್ಲಿನ 10 ಎಕರೆ ಜಾಗವನ್ನು ಅಖಿಲ ಭಾರತ ವಾಕ್‌ ಶ್ರವಣ ಸಂಸ್ಥೆಗೆ ಉಚಿತವಾಗಿ ಮಂಜೂರು

* ದೇವರಾಜ ಅರಸು ಶತಮಾನೋತ್ಸವ ಸಮಿತಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿ ನಿವೃತ್ತ ಹೆಚ್ಚುವರಿ ನಿರ್ದೇಶಕ ತಿಪ್ಪೇಸ್ವಾಮಿ ನೇಮಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT