ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವೇಶ್ವರ ಸ್ವಾಮೀಜಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

4 ಸಂಪುಟ, 1341 ಪುಟಗಳ ಆರೋಪ ಪಟ್ಟಿ
Last Updated 26 ಸೆಪ್ಟೆಂಬರ್ 2015, 9:45 IST
ಅಕ್ಷರ ಗಾತ್ರ

ಬೆಂಗಳೂರು: ರಾಮಕಥಾ ಗಾಯಕಿ ಪ್ರೇಮಲತಾ ಮೇಲಿನ ಅತ್ಯಾಚಾರ  ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಸಿಐಡಿ ಅಧಿಕಾರಿಗಳು ಶನಿವಾರ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಡಿವೈಎಸ್‌ಪಿ ಅಶೋಕ್‌ ಕುಮಾರ್‌ ಅವರು ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ  ಸಲ್ಲಿಸಿದರು.  ಸಾಕ್ಷ್ಯಾಧಾರಗಳು, ಸಾಕ್ಷ್ಯಗಳ ಹೇಳಿಕೆ ಸೇರಿ ಆರೋಪ ಪಟ್ಟಿ 4 ಸಂಪುಟ ಹೊಂದಿದ್ದು, 1341 ಪುಟಗಳಿವೆ ಎಂದು ಮೂಲಗಳು ಹೇಳಿವೆ.

‘ಸ್ವಾಮೀಜಿ ಹಾಗೂ ಫಿರ್ಯಾದಿ ಹೇಳಿಕೆ, ಮೊಬೈಲ್‌ ಕರೆಗಳ ವಿವರಗಳು (ಸಿಡಿಆರ್‌), ಮಹಜರು ವೇಳೆ ದೊರೆತ ಸಾಕ್ಷ್ಯಗಳು, 48 ಸಾಕ್ಷಿಗಳ ಹೇಳಿಕೆಗಳು, ಎಫ್‌ಎಸ್‌ಎಲ್‌–ಡಿಎನ್‌ಎ ವರದಿಗಳು, ಏಕಾಂತ ಸೇವೆಯ ಬಗ್ಗೆ ಏಳು ಮಂದಿಯ ವಿಚಾರಣೆ ಸೇರಿದಂತೆ ತನಿಖಾ ಕಾಲದಲ್ಲಿ ದೊರೆತ ಎಲ್ಲ ಸಾಕ್ಷ್ಯಗಳನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ರಾಮಕಥಾ ನಡೆದ ರಾಜ್ಯದ 9 ಜಿಲ್ಲೆಗಳ ಸಾಕ್ಷ್ಯ ಸಂಗ್ರಹ ವೈದ್ಯಕೀಯ ತಪಾಸಣೆಯ ವಿವರಗಳನ್ನೂ  ಚಾರ್ಜ್‌ಶೀಟ್‌ ಒಳಗೊಂಡಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT