ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಕನ್ನಡಕ...

Last Updated 9 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಫೇಸ್‌ಬುಕ್‌ನ ಸಂಸ್ಥಾಪಕ ಜುಕರ್‌ಬರ್ಗ್‌ರ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಿಸುವ ಸಂದರ್ಭದಲ್ಲಿ ತಮ್ಮ ತಾಯಿಯವರು ಮಕ್ಕಳನ್ನು ಸಾಕಲು ನೆರೆಹೊರೆಯವರ ಬಟ್ಟೆ–ಪಾತ್ರೆ ತೊಳೆದು ಶ್ರಮಪಟ್ಟಿದ್ದನ್ನು ನೆನಪು ಮಾಡಿಕೊಳ್ಳುತ್ತ ಭಾವುಕತೆಯಿಂದ ಗದ್ಗದಿತರಾಗಿ ಕಣ್ಣೀರು ಹರಿಸಿ ಮಾತೃಪ್ರೇಮದ ಮಹತ್ವವನ್ನು ಎತ್ತಿಹಿಡಿದಿದ್ದಾರೆ.

ಆದರೆ ವಿರೋಧ ಪಕ್ಷ ಕಾಂಗ್ರೆಸ್‌ ಈ ಭಾವುಕ ಸಂದರ್ಭವನ್ನೂ ರಾಜಕೀಯದ ಕನ್ನಡಕದಲ್ಲಿ ನೋಡುತ್ತ ಮೋದಿಯವರು ತಮ್ಮ ತಾಯಿಯವರ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ, ತಾಯಿಯ ಗೌರವವನ್ನು ಹಾಳು ಮಾಡುತ್ತಿದ್ದಾರೆ ಎಂದು ಟೀಕೆ ಮಾಡುತ್ತಿದೆ. ಈ ನಿಲುವು ಎಷ್ಟು ಸರಿ?

ತಾನು ಉನ್ನತ ಸ್ಥಾನ ಗಳಿಸಲು ತಾಯಿ ಮಾಡಿದ ಹೋರಾಟ, ಆಕೆಯ ತ್ಯಾಗವನ್ನು ನೆನಪು ಮಾಡಿಕೊಂಡು ಅತ್ತರೆ ಅದನ್ನು ಸುಳ್ಳು ಎನ್ನುವವರಿಗೆ ತಾಯಿ ಪ್ರೀತಿಯ ಅರಿವಿಲ್ಲ ಎಂದು ಹೇಳಬೇಕಾಗುತ್ತದೆ. ಮೋದಿಯವರು ರಾಜಕೀಯವಾಗಿ ಏನೇ ಆಗಿರಲಿ, ಆದರೆ ಮಾನವೀಯ ಸಂವೇದನೆಯ ಉದಾಹರಣೆಯಾಗಿ ನಾವು ಈ ಘಟನೆಯನ್ನು ಪರಿಗಣಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT