ನವದೆಹಲಿ: ಖ್ಯಾತ ಯೋಗ ಗುರು, ರಾಜ್ಯದ ಬಿ.ಕೆ.ಎಸ್ ಅಯ್ಯಂಗಾರ್ (ಪದ್ಮವಿಭೂಷಣ), ಇಸ್ರೊ ಅಧ್ಯಕ್ಷ ಕೆ.ರಾಧಾಕೃಷ್ಣನ್ (ಪದ್ಮಭೂಷಣ), ಪ್ರನಾಳ ಶಿಶು ತಜ್ಞೆ ಡಾ. ಕಾಮಿನಿ ರಾವ್ (ಪದ್ಮಶ್ರೀ) ಸೇರಿದಂತೆ ರಾಜ್ಯದ ಒಟ್ಟು ಏಳು ಜನ ಸಾಧಕರನ್ನು ಈ ಬಾರಿಯ ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.

ಖ್ಯಾತ ವಿಜ್ಞಾನಿ ಮಹಾರಾಷ್ಟ್ರದ ಡಾ. ರಘುನಾಥ ಎ. ಮಶೇಲ್‌ಕರ್ ಅವರನ್ನು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣಕ್ಕೆ ಆಯ್ಕೆ ಮಾಡಲಾಗಿದೆ. 24 ಜನರನ್ನು ಪದ್ಮಭೂಷಣ ಹಾಗೂ 101 ಜನರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

ರಾಜ್ಯಕ್ಕೆ ಏಳು ಪದ್ಮ ಪ್ರಶಸ್ತಿ
ಪದ್ಮಭೂಷಣ ಪ್ರಶಸ್ತಿ ಪಡೆದವರಲ್ಲಿ ಖ್ಯಾತ ಹಿಂದುಸ್ತಾನಿ ಗಾಯಕಿ ಪರ್ವಿನ್ ಸುಲ್ತಾನಾ, ಖ್ಯಾತ ನಟ ಕಮಲ್ ಹಾಸನ್, ಟೆನ್ನಿಸ್ ಆಟಗಾರ ಲಿಯಾಂಡರ್ ಪಯಸ್ ಪ್ರಮುಖರಾಗಿದ್ದರೆ ಪದ್ಮಶ್ರೀಗೆ ಆಯ್ಕೆಯಾದವರಲ್ಲಿ ನಟಿ ವಿದ್ಯಾ ಬಾಲನ್, ಕ್ರಿಕೆಟ್ ಆಟಗಾರ ಯುವರಾಜ ಸಿಂಗ್ ಮತ್ತಿತರರು ಸೇರಿದ್ದಾರೆ.

ರಾಜ್ಯದ ಸಾಧಕರು

*ಯೋಗ ಗುರು ಬಿಕೆಎಸ್ ಅಯ್ಯಂಗಾರ್ (ಪದ್ಮವಿಭೂಷಣ)
*ಐಐಎಸ್‌ಸಿ ನಿರ್ದೇಶಕ ಪ್ರೊ.ಪದ್ಮನಾಭನ್ ಬಲರಾಂ
(ಪದ್ಮಭೂಷಣ)
* ಕೃಷಿ ವಿಜ್ಞಾನಿ ಡಾ.ಎಂ ಮಹಾದೇವಪ್ಪ (ಪದ್ಮಭೂಷಣ)
* ಇಸ್ರೋ ಮಖ್ಯಸ್ಥ ಡಾ. ರಾಧಾಕೃಷ್ಣನ್ ಕೊಪ್ಪಿಲ್ಲಿ (ಪದ್ಮಭೂಷಣ)
* ಪ್ರೊ.ಎಳುವತಿಂಗಳ್ ದೇವಾಸಿ ಜೇಮಿಸ್ (ವಿಜ್ಞಾನ,ಎಂಜಿನಿಯರಿಂಗ್: ಪದ್ಮಶ್ರೀ)
* ಪ್ರನಾಳ ಶಿಶು ತಜ್ಞೆ ಡಾ. ಕಾಮಿನಿ ರಾವ್ (ಪದ್ಮಶ್ರೀ)
* ಅಂಗವಿಕಲ ಕ್ರೀಡಾಪಟು ಎಚ್. ಬೊನಿಫೇಸ್ ಪ್ರಭು (ಪದ್ಮಶ್ರೀ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.