ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಎಚ್‌.ಎಲ್‌.ದತ್ತು ನೂತನ ಸಿಜೆಐ

Last Updated 28 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹಂದ್ಯಾಳ್‌ ಲಕ್ಷ್ಮಿನಾರಾಯಣ­ಸ್ವಾಮಿ ದತ್ತು  ಅವರು ಸುಪ್ರೀಂ ಕೋರ್ಟ್‌ನ 42ನೇ ಮುಖ್ಯ ನ್ಯಾಯ­ಮೂರ್ತಿಯಾಗಿ (ಸಿಜೆಐ) ಭಾನುವಾರ ದೇವರ ಹೆಸರಿ­ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ರಾಷ್ಟ್ರಪತಿ ಭವನದ ದರ್ಬಾರ್‌ ಹಾಲ್‌ನಲ್ಲಿ ನಡೆದ ಸರಳ ಸಮಾರಂಭ­ದಲ್ಲಿ 63 ವರ್ಷದ ಎಚ್‌.ಎಲ್‌. ದತ್ತು ಅವರಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಪ್ರಮಾಣವಚನ ಬೋಧಿಸಿದರು.

ದತ್ತು ಅವರು ನ್ಯಾಯಾಂಗದ ಅತ್ಯು­ನ್ನತ ಹುದ್ದೆ ಅಲಂಕರಿಸಿದ ಕರ್ನಾಟಕದ ನಾಲ್ಕನೇ ನ್ಯಾಯಮೂರ್ತಿ ಮತ್ತು ಬಳ್ಳಾರಿ ಜಿಲ್ಲೆಯ ಮೊದಲಿಗರು. ಇದಕ್ಕೂ ಹಿಂದೆ ರಾಜ್ಯದ ಇ.ಎಸ್‌. ವೆಂಕಟರಾಮಯ್ಯ (1989), ಎಂ. ಎನ್‌. ವೆಂಕಟಾಚಲಯ್ಯ (1993), ಎಸ್‌. ರಾಜೇಂದ್ರ ಬಾಬು (2004) ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು.

‘2ಜಿ’ ತರಂಗಾಂತರ ಹಂಚಿಕೆ ಹಗರಣದ ವಿಚಾರಣೆ ನಡೆಸುತ್ತಿರುವ ಪೀಠದ ಅಧ್ಯಕ್ಷರೂ ಆಗಿರುವ ದತ್ತು ಅವರ ಅಧಿಕಾರಾವಧಿ ಇನ್ನೂ 14 ತಿಂಗಳ ಕಾಲ ಇದೆ. ಅವರು 2015ರ ಡಿಸೆಂಬರ್‌ 3ರಂದು ನಿವೃತ್ತರಾಗ­ಲಿದ್ದಾರೆ. ‘ಭಾರತದ ಸರ್ವೋಚ್ಚ ನ್ಯಾಯಾ­ಲಯ ಜಗತ್ತಿನಲ್ಲೇ ಅತ್ಯುತ್ತಮ ನ್ಯಾಯ­ದಾನ ಸಂಸ್ಥೆ. ಇದರ ಘನತೆಯನ್ನು ಮತ್ತಷ್ಟು ಎತ್ತರಿಸಲು ದೇಶವಾಸಿಗಳ ಹಾರೈಕೆಯನ್ನು ಅಪೇಕ್ಷಿಸುವೆ. ಇದರಿಂದ ನನಗೆ ಧೈರ್ಯ ಮತ್ತು ವಿಶ್ವಾಸ ವೃದ್ಧಿ­ಸುತ್ತದೆ’ ಎಂದು ಮುಖ್ಯ ನ್ಯಾಯ­ಮೂರ್ತಿ ನೇಮಕಾತಿ ಕಾಗದಪತ್ರಗಳು ಪ್ರಧಾನಿ ಕಾರ್ಯಾಲಯಕ್ಕೆ ಕಳೆದ ತಿಂಗಳು ತಲುಪಿದ ಸಂದರ್ಭದಲ್ಲಿ ದತ್ತು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT