ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಯ್ಯ ಆಸ್ಪತ್ರೆ–ಇಲಿನಾಯ್‌ ವಿ.ವಿ ಒಪ್ಪಂದ

Last Updated 26 ಫೆಬ್ರುವರಿ 2015, 19:49 IST
ಅಕ್ಷರ ಗಾತ್ರ

ಬೆಂಗಳೂರು: ಜಂಟಿಯಾಗಿ ತರಬೇತಿ ಹಾಗೂ ಸಂಶೋಧನೆ ನಡೆಸುವುದು ಸೇರಿದಂತೆ ಹಲವು ವಿಷಯಗಳ ಸಂಬಂಧ ಎಂ.ಎಸ್‌.ರಾಮಯ್ಯ ಆಸ್ಪತ್ರೆಯು, ಅಮೆರಿಕದ ಇಲಿನಾಯ್‌ ವಿಶ್ವವಿದ್ಯಾ ಲಯದ ಜಾಗತಿಕ ಆರೋಗ್ಯ ಕೇಂದ್ರದ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.

ಅಗ್ಗದ ದರದಲ್ಲಿ ಆರೋಗ್ಯ ಸೇವೆ ನೀಡುವುದು, ತಂತ್ರಜ್ಞಾನ ವರ್ಗಾವಣೆ, ತಜ್ಞರ ವಿನಿಮಯ ಕಾರ್ಯಕ್ರಮಗಳ ಬಗ್ಗೆ ಒಪ್ಪಂದಕ್ಕೆ ಬರಲಾಗಿದೆ ಎಂದು ರಾಮಯ್ಯ ಸಮೂಹ ಸಂಸ್ಥೆಗಳ ಚೇರ್‌ಮನ್‌  ಡಾ.ಎಂ.ಆರ್‌. ಜಯ ರಾಮ್‌ ಅವರು ಗುರುವಾರ ತಿಳಿಸಿ ದರು.

ಆಸ್ಪತ್ರೆಯ ಎಚ್‌ಸಿಜಿ–ಎಂಎಸ್‌ಆರ್‌ ಕ್ಯಾನ್ಸರ್‌ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ರಕ್ತ ವಿಜ್ಞಾನ ಹಾಗೂ ಮೂಳೆ ಮಜ್ಜೆ ಕಸಿ ಘಟಕಕ್ಕೆ ಈ ಸಂದರ್ಭದಲ್ಲಿ ಅಧಿಕೃತ ಚಾಲನೆ ನೀಡಲಾಯಿತು.

ವಿಷಯಕ್ಕೆ ಸಂಬಂಧಿಸಿದಂತೆಯೂ ಇಲಿನಾಯ್ಸ್‌ ವಿ.ವಿ ಜೊತೆ ಒಪ್ಪಂದ ಮಾಡಿಕೊಳ್ಳ ಲಾಗಿದೆ ಎಂದು ಹೇಳಿದರು. ಇಲಿನಾಯ್‌ ವಿ.ವಿಯ ಡಾ.ಡೆಮಿಯಾನೊ ರಾಂಡೆಲಿ ಅವರು ಈ ಘಟಕಕ್ಕೆ ಸಲಹೆಗಾರರಾಗಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT