ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ಗಾಂಧಿ ವಿದೂಷಕ: ಮುಸ್ತಫಾ ಟೀಕೆ

Last Updated 28 ಮೇ 2014, 19:30 IST
ಅಕ್ಷರ ಗಾತ್ರ

ಕೊಚ್ಚಿ (ಐಎಎನ್‌ಎಸ್): ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ತೀವ್ರ ಮುಖಭಂಗ ಅನುಭವಿಸಿರುವ ಹಿನ್ನೆಲೆ­ಯಲ್ಲಿ, ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ‘ವಿದೂಷಕ’ ಎಂದು ಕೇರಳ ಕಾಂಗ್ರೆಸ್‌ ಮುಖಂಡ ಟಿ.ಎಚ್.­ಮುಸ್ತಫಾ ಅವರು ಮೂದಲಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ಹುದ್ದೆಗೇರುವುದೆಂದರೆ ಮಕ್ಕಳಾಟವಲ್ಲ. ಚುನಾವಣೆ ಸಂದರ್ಭ­ದಲ್ಲಿ ರಾಹುಲ್‌ ಒಬ್ಬ ವಿದೂಷಕನಂತೆ ವರ್ತಿಸಿದರು. ಇದನ್ನು ಅರಿತ ಜನ ಪಕ್ಷವನ್ನು ಹೀನಾಯವಾಗಿ ಸೋಲಿಸಿ­ದರು’ ಎಂದು  ಆರೋಪಿಸಿದ್ದಾರೆ.

‘ಸೋಲಿನ ಹೊಣೆ ಹೊತ್ತು ಅವರು ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀ­ನಾಮೆ ನೀಡಬೇಕು. ಸ್ವತಃ ಅವರೇ ಈ ಕೆಲಸ ಮಾಡದಿದ್ದರೆ ಪಕ್ಷವೇ ಅವರನ್ನು ಈ ಸ್ಥಾನದಿಂದ ತೆರವುಗೊಳಿಸಬೇಕು. ಅದಾಗದಿದ್ದಲ್ಲಿ ಪ್ರಿಯಾಂಕಾ ವಾಧ್ರಾ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ರಾಹುಲ್ ಅವರು ಅಂತರ್ಜಾಲ ಮತ್ತು ಕಂಪ್ಯೂಟರ್‌ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಚಾರ ಕಾರ್ಯಕ್ಕೆ ಇಳಿದರು. ಅವರ ಜತೆಗಿದ್ದವರು ಸಹ ಅವರ ಶೈಲಿಯನ್ನು ಹೊಗಳಿದರು. ಇದರಿಂದ ಪಕ್ಷಕ್ಕೆ ಹಿನ್ನಡೆ ಉಂಟಾಯಿತು. ನಮ್ಮ ದೌರ್ಭಾಗ್ಯ­ವೆಂದರೆ ಎ.ಕೆ.ಆಂಟನಿ ಅವರೂ ರಾಹುಲ್ ಬೆನ್ನಿಗೆ ನಿಂತರು’ ಎಂದು ಮುಸ್ತಫಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT