ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು ಸೆಮಿನಾರ್‌ಗೆ ಬಂದು ಮಾತನಾಡಲಾದೀತೇ: ಬಿಕೆಸಿ

Last Updated 24 ಜನವರಿ 2016, 19:49 IST
ಅಕ್ಷರ ಗಾತ್ರ

ಬೆಂಗಳೂರು: ರೈತರು, ಶ್ರಮಿಕರು ಅಸಹನೆ ವ್ಯಕ್ತಪಡಿಸುತ್ತಿಲ್ಲ ಎಂದು ವಿಮರ್ಶಕ ಪ್ರೊ. ನಟರಾಜ್ ಹುಳಿಯಾರ್ ಅವರು ‘ಧಾರವಾಡ ಸಾಹಿತ್ಯ ಸಂಭ್ರಮ’ದಲ್ಲಿ ಆಡಿದ್ದ ಮಾತಿಗೆ ಕಾಂಗ್ರೆಸ್‌ ಮುಖಂಡ ಪ್ರೊ.ಬಿ.ಕೆ. ಚಂದ್ರಶೇಖರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ರೈತರು, ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬದವರು ನೇರವಾಗಿ ಅಥವಾ ರೈತ ಸಂಘಟನೆಗಳ ಮೂಲಕ ತಮ್ಮ ಸಂಕಟ, ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದನ್ನು ನಾನು ಪ್ರತ್ಯಕ್ಷ ಕಂಡಿದ್ದೇನೆ. ರೈತರು, ಗ್ರಾಮೀಣ ಮಹಿಳೆಯರು ಪತ್ರಿಕಾ ಸಂದರ್ಶನದಲ್ಲಿ, ಸೆಮಿನಾರ್‌ಗಳಲ್ಲಿ ಪಾಲ್ಗೊಂಡು ಅಸಹನೆ ಬಗ್ಗೆ ಮಾತನಾಡಲು ಸಾಧ್ಯವೇ?’ ಎಂದಿದ್ದಾರೆ.

‘ಸಾಹಿತ್ಯ ಸಂಭ್ರಮ’ದಲ್ಲಿ ಮಾತನಾಡಿದ್ದ ಡಾ. ಹುಳಿಯಾರ್, ‘ರೈತರು, ಶ್ರಮಿಕರು ಅಸಹನೆ ವ್ಯಕ್ತಪಡಿಸುತ್ತಿಲ್ಲ. ಆರಾಮಜೀವಿಗಳು ತಮ್ಮ ಅಸ್ತಿತ್ವದ ಪ್ರಶ್ನೆ ಎದುರಾದಾಗ ಇದನ್ನು ಹುಟ್ಟು ಹಾಕುತ್ತಾರೆ’ ಎಂದು ಹೇಳಿದ್ದರು.

‘ಹುಳಿಯಾರ್ ಅವರ ಈ ಮಾತು ಸಿನಿಕತನದ್ದು. ಕುಂ. ವೀರಭದ್ರಪ್ಪ, ಶಶಿ ದೇಶಪಾಂಡೆ, ಆನಂದ ಪಟವರ್ಧನ್, ಅಶೋಕ ವಾಜಪೇಯಿ, ಪಿ.ಎಂ. ಭಾರ್ಗವ, ನಯನತಾರ ಸೆಹಗಲ್ ಮತ್ತಿತರರು ಆರಾಮ ಜೀವಿಗಳಲ್ಲ.  ಬಹುಶಃ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಈ ಕೆಟಗರಿಯಲ್ಲಿ ಬರುವುದಿಲ್ಲ ಎಂದೇ ನನ್ನ ವಿಶ್ವಾಸ’ ಎಂದು ಚಂದ್ರ ಶೇಖರ್‌ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT