ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಖಿತ ಉತ್ತರ ಕೇಳಿದ ಮಹಿಳಾ ಆಯೋಗದ ಅಧ್ಯಕ್ಷೆ

ಅತ್ಯಾಚಾರ ಸಂತ್ರಸ್ತೆಯೊಂದಿಗೆ ಸೆಲ್ಫಿ
Last Updated 30 ಜೂನ್ 2016, 11:11 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಅತ್ಯಾಚಾರಕ್ಕೊಳಗಾದ ಮಹಿಳೆಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ರಾಜಸ್ತಾನದ ಮಹಿಳಾ ಆಯೋಗದ ಸದಸ್ಯೆ ಸೌಮ್ಯಾ ಗುರ್ಜಾರ್ ಅವರಿಂದ ಆಯೋಗದ ಅಧ್ಯಕ್ಷರು ಲಿಖಿತ ಉತ್ತರ ಕೇಳಿದ್ದಾರೆ.

ವಿಶೇಷವೆಂದರೆ ಸೌಮ್ಯಾ ಅವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಆಯೋಗದ ಅಧ್ಯಕ್ಷೆ ಸುಮನ್ ಶರ್ಮಾ ಅವರು ಸಹ ಜತೆ ಇದ್ದರು.

ಸೌಮ್ಯಾ ಅವರು ಬುಧವಾರ ಜೈಪುರದ ಉತ್ತರ ವಲಯದಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಸಂತ್ರಸ್ತೆಯನ್ನು ಭೇಟಿಯಾಗಲು ಸುಮನ್ ಶರ್ಮಾ ಅವರೊಂದಿಗೆ ಹೋಗಿದ್ದರು. ಈ ವೇಳೆ ಅವರು ಸಂತ್ರಸ್ತೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.

‘ನಾನು ಸಂತ್ರಸ್ತೆಯೊಂದಿಗೆ ಮಾತನಾಡುತ್ತಿದ್ದೆ. ಈ ವೇಳೆ ಸೌಮ್ಯಾ ಸೆಲ್ಫಿ ತೆಗದುಕೊಂಡಿದ್ದಾರೆ. ಈ ರೀತಿಯ ವರ್ತನೆಯನ್ನು ನಾನು ಸಹಿಸುವುದಿಲ್ಲ. ಅವರಿಂದ ಲಿಖಿತ ಉತ್ತರ ಕೇಳಿದ್ದೇನೆ’ ಎಂದು ಸುಮನ್ ಶರ್ಮಾ ಹೇಳಿದ್ದಾರೆ.

ವರದಕ್ಷಿಣೆ ಹಣ ತರಲಿಲ್ಲ ಎಂದು 30 ವರ್ಷದ ಮಹಿಳೆ ಮೇಲೆ ಆಕೆಯ ಪತಿ ಮತ್ತು ಆತನ ಇಬ್ಬರು ಸಹೋದರರು ಅತ್ಯಾಚಾರ ಎಸಗಿದ್ದರು. ಸಂತ್ರಸ್ತೆಯನ್ನು ಭೇಟಿಯಾಗಲು ಹೋಗಿದ್ದ ವೇಳೆ ಸೌಮ್ಯ ಗುರ್ಜಾರ್ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಛಾಯಾಚಿತ್ರ ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT