ಟ್ರಿಪೊಲಿ ಸೆಕ್ಯುರಿಟಿ ಏಜೆನ್ಸಿ ಪ್ರಕಾರ, ಮೂವರು ಭದ್ರತಾ ಸಿಬ್ಬಂದಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಭದ್ರತಾ ಸಿಬ್ಬಂದಿ ಮುಖ್ಯದ್ವಾರದ ಬಳಿ ಉಗ್ರರರನ್ನು ತಡೆದು ಪರಿಶೀಲನೆಗೆ ಮುಂದಾದಾಗ ಮನಬಂದಂತೆ ಗುಂಡು ಹಾರಿಸಿದರು. ನಂತರ ಹೋಟೆಲಿನ ಲಾಬಿಗೆ ನುಗ್ಗಿ ಸಿಬ್ಬಂದಿಗಳ ಮೇಲೆ ಗುಂಡಿನ ಮಳೆಗೆರೆದರು. ಪ್ರತ್ಯಕ್ಷದರ್ಶಿಗಳ ಪ್ರಕಾರ ಈ ತಂಡದಲ್ಲಿ ಒಟ್ಟು ಐವರು ಉಗ್ರರಿದ್ದು, ಎಲ್ಲರೂ ಗುಂಡು ನಿರೋಧಕ ಜಾಕೆಟ್ ಧರಿಸಿದ್ದಾರೆ.
ಹೋಟೆಲಿನಲ್ಲಿ ಇಟಲಿ, ಬ್ರಿಟನ್, ಟರ್ಕಿ ದೇಶದ ಪ್ರವಾಸಿಗರಿದ್ದರು. ಉಗ್ರರು ನುಗ್ಗಿರುವ ಮಾಹಿತಿ ಲಭಿಸುತ್ತಿದ್ದಂತೆ ಕೆಲವು ಪ್ರವಾಸಿಗರು ಹಿಂಬದಿ ಬಾಗಿಲಿನ ಮೂಲಕ ಪಾರ್ಕಿಂಗ್ ಲಾಟ್ ತಲುಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು.ತಪ್ಪಿಸಿಕೊಳ್ಳುವ ಸಂದರ್ಭದಲ್ಲೇ ಪಾರ್ಕಿಂಗ್ ಲಾಟ್‌ನ ಅನತಿ ದೂರದಲ್ಲಿ ಕಾರ್ ಬಾಂಬ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಮೃತಪಟ್ಟರು ಎಂಬ ಮಾಹಿತಿಯೂ ಸುದ್ದಿಸಂಸ್ಥೆಗೆ ಲಭ್ಯವಾಗಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.