ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ ಆಯ್ಕೆ ಸಮಿತಿಗೆ ಕೋರಂ ಬೇಡ

Last Updated 18 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಲೋಕಪಾಲ ಹಾಗೂ  ಸಿಬಿಐ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಲು  ಲೋಕಪಾಲ  ಮತ್ತು ಲೋಕಾಯುಕ್ತ ಕಾಯ್ದೆ ಹಾಗೂ ಸಿಬಿಐ ಸ್ಥಾಪನೆಗೆ ಕಾರಣವಾದ ದೆಹಲಿ ವಿಶೇಷ  ಪೊಲೀಸ್‌ ಸ್ಥಾಪನಾ  (ಡಿಎಸ್‌ಪಿಇ) ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಹೊರಟಿದೆ.

ಲೋಕಪಾಲರು ಹಾಗೂ ಸಿಬಿಐ ಮುಖ್ಯಸ್ಥರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಕೋರಂ ಇರಬೇಕಿಲ್ಲ ಎಂಬ ತಿದ್ದುಪಡಿಯನ್ನು ಈಗ ತರಲಾಗುತ್ತಿದೆ. ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷ ಇರದೇ ಇದ್ದ ಸಂದರ್ಭದಲ್ಲಿ ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷದ ನಾಯಕ ಸಿಬಿಐ ಮುಖ್ಯಸ್ಥರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ  ಭಾಗಿಯಾಗಬಹುದು ಎಂಬ ನಿಯಮಾವಳಿ ಜಾರಿಗೆ ತರಲು ದೆಹಲಿ ವಿಶೇಷ  ಪೊಲೀಸ್‌ ಸ್ಥಾಪನಾ  (ಡಿಎಸ್‌ಪಿಇ) ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.

ಈ ಎರಡೂ ಕಾಯ್ದೆಗಳಿಗೆ  ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸಲ್ಲಿಸಿದ ತಿದ್ದುಪಡಿ ಪ್ರಸ್ತಾವವನ್ನು ಕಾನೂನು ಸಚಿವಾಲಯ ಈಗಾಗಲೇ ಅಂತಿಮಗೊಳಿಸಿದೆ. ಕಾನೂನು ಸಚಿವಾಲಯ ಈ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ ತಕ್ಷಣ ಕೇಂದ್ರ ಸಂಪುಟದ ಮುಂದೆ ಇದನ್ನು ಇಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT