ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಉಳಿಸಿ–ಧರಣಿ

Last Updated 1 ಡಿಸೆಂಬರ್ 2015, 19:54 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಾಯುಕ್ತ ಸಂಸ್ಥೆ ಉಳಿಸಿ’  ಎಂದು ಆಗ್ರಹಿಸಿ ಜನಾಧಿಕಾರ ಸಂಘರ್ಷ ಪರಿಷತ್‌, ಭಾರತೀಯ ವಿದ್ಯಾರ್ಥಿ ಒಕ್ಕೂಟ (ಎಸ್ಎಫ್‌ಐ) ಹಾಗೂ ಸ್ವರಾಜ್‌ ಅಭಿಯಾನ ಸದಸ್ಯರು ಮಂಗಳವಾರ ಆನಂದ ರಾವ್‌ ವೃತ್ತದ ಬಳಿಯ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದರು.

ಉಪ ಲೋಕಾಯುಕ್ತ ಸುಭಾಷ್‌ ಬಿ ಅಡಿ ಅವರ ಪದಚ್ಯುತಿಗೆ ಸಂಬಂಧಿಸಿದ ಪ್ರಸ್ತಾವ ಕೈಬಿಡಬೇಕು ಮತ್ತು ಭಾಸ್ಕರರಾವ್‌ ಪದಚ್ಯುತಿಯ ಪ್ರಸ್ತಾವನೆ ಮುಂದುವರಿಸಬೇಕು ಈವಿಷಯದಲ್ಲಿ ಸ್ಪೀಕರ್‌ ಕಾಗೋಡು ತಿಮ್ಮಪ್ಪನವರು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಅವರು ತಮ್ಮ
ಸ್ಥಾನದ ಘನತೆ ಗೌರವ ಕಾಪಾಡಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.

ಬೆಳಿಗ್ಗೆ 10ರಿಂದ ಸಂಜೆ 4 ಗಂಟೆ ವರೆಗೆ ನಡೆದ ಈ  ಧರಣಿಯಲ್ಲಿ ಪರಿಷತ್‌ನ ಪ್ರಕಾಶ್‌ ಬಾಬು, ರಾಜೇಶ್‌ ಕುಮಾರ, ನಾರಾಯಣ, ರಮೇಶ್‌, ಆಶೀಶ್‌, ಕಪಾಲಿ ಶ್ರೀನಿವಾಸನ್, ಬೇಗೂರಿನ ಲಕ್ಷ್ಮೀನಗರ ನಿವಾಸಿಗಳು, ಪುಟ್ಟೇನಹಳ್ಳಿ ಕೆರೆ ಒತ್ತುವರಿಯ ಕೊಳೆಗೇರಿಯ ಪುನರ್ವಸತಿ ಪ್ರದೇಶದ ಮಹಿಳೆಯರು, ಕಡ್ಡಾಯ ಶಿಕ್ಷಣ ಹಕ್ಕು ಫಲಾನುಭವಿ ಪೋಷಕರೂ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು  ಜನರು ಪಾಲ್ಗೊಂಡಿದ್ದರು.

ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರಿಗೆ ಈ ಕುರಿತಂತೆ ಬುಧವಾರ (ಡಿ.2) ಮನವಿ ಸಲ್ಲಿಸಲಾಗುವುದು ಎಂದು ಜನಾಧಿಕಾರ ಸಂಘರ್ಷ ಪರಿಷತ್‌ನ ಮುಖಂಡ ಆದರ್ಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT