ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸಿಗರ ಧರ್ಮ

ಅಕ್ಷರ ಗಾತ್ರ

ಬಿಬಿಎಂಪಿಯು ವಲಸಿಗರ ಅನುಕೂಲಕ್ಕಾಗಿ 6 ಭಾಷೆಗಳಲ್ಲಿ ಕಾಲ್‌ಸೆಂಟರ್ ಸೌಲಭ್ಯ ಒದಗಿಸಲಿದೆಯಂತೆ. ಇದನ್ನು ವಿರೋಧಿಸುವ ಕನ್ನಡಿಗರನ್ನು ದೇಶದ್ರೋಹಿಗಳೆಂದೇ ಬಿಂಬಿಸುತ್ತಾರೆ. ಆದರೆ ಒಮ್ಮೆ ಯೋಚಿಸಿ, ಬೇರೆ ಊರುಗಳಲ್ಲಿರುವ ಕನ್ನಡಿಗರಿಗೆ ಅಲ್ಲಿ ಕನ್ನಡದಲ್ಲಿ ಸೇವೆ ಸಿಗುತ್ತದೆಯೇ?
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಫ್ಲಿಪ್‌ಕಾರ್ಟ್‌ನಂತಹ ಸಂಸ್ಥೆಗಳೇ ಇನ್ನೂ ಕನ್ನಡದಲ್ಲಿ ಸೇವೆ ಕೊಡುತ್ತಿಲ್ಲ. ಬೆಂಗಳೂರಿನ ಟ್ರಾಫಿಕ್ ಪೊಲೀಸರಿಗೆ ಕನ್ನಡದಲ್ಲಿ ಮಾಹಿತಿ ಕೊಡಿ ಎಂದು ಪದೇ ಪದೇ ಎಚ್ಚರಿಸುತ್ತಲೇ ಇರಬೇಕು. ರಾಜಧಾನಿಯಲ್ಲಿ ಕನ್ನಡದ ಪರಿಸ್ಥಿತಿ ಹೀಗಿರುವಾಗ ಬಿಬಿಎಂಪಿಯ ಈ ನಿರ್ಧಾರ ಮೂರ್ಖತನದ್ದೇ ಸರಿ.

ವಲಸಿಗರು ವಲಸೆ ಹೋಗುವ ನಾಡಿನ ಭಾಷೆಯನ್ನು ಕಲಿತು ಅಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆಯಬೇಕು. ಇದು ವಲಸಿಗನ ಧರ್ಮ ಹಾಗೂ ಆ ಮಣ್ಣಿನ ಭಾಷೆಗೆ ಒಬ್ಬ ವಲಸಿಗ ಕೊಡಬೇಕಾದ ಕನಿಷ್ಠ ಮರ್ಯಾದೆ. ಈ ವಿಷಯ ಪರಭಾಷಿಗರೊಟ್ಟಿಗೆ ಅವರವರ ಭಾಷೆಗಳಲ್ಲೇ ವ್ಯವಹರಿಸುವ ಕನ್ನಡಿಗರಿಗೆ ಗೊತ್ತಿಲ್ಲದೇ ಇರುವುದು ದುರಂತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT