ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದ್ರಾ ಹಗರಣ: ಕಡತದ 2 ಪುಟಗಳು ನಾಪತ್ತೆ: ಖೇಮ್ಕಾ

Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಚಂಡೀಗಡ (ಪಿಟಿಐ): ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಮತ್ತು  ಡಿಎಲ್‌ಎಫ್ ಹಗರಣಕ್ಕೆ ಸಂಬಂ­ಧಿ­ಸಿದ ಕಡತದ ಮೊದಲ ಎರಡು ಪುಟ­ಗಳು ನಾಪತ್ತೆಯಾಗಿದ್ದು, ಈ ಬಗ್ಗೆ ಎಫ್‌ಐಆರ್ ದಾಖಲಿಸಬೇಕು ಎಂದು ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ  ಸರ್ಕಾರವನ್ನು ಒತ್ತಾಯಿಸಿ­ದ್ದಾರೆ. ಖೇಮ್ಕಾ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿ­ಯಿಂದ ಈ ವಿಚಾರ ಗೊತ್ತಾಗಿದೆ.

ಕಡತದ ಮೊದಲ ಎರಡು ಪುಟಗಳು ನಪತ್ತೆಯಾಗಿರುವುದು ನಿಜ ಎಂದು ಒಪ್ಪಿ­ಕೊಂಡಿರುವ ಹರಿಯಾಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ಕೆ. ಗುಪ್ತಾ ಅವರು, ಈ ಬಗ್ಗೆ ತನಿಖೆ ನಡೆಸಲಾಗು­ತ್ತಿದ್ದು, ನಾಪತ್ತೆಯಾಗಿ­ರುವ ಪುಟಗಳನ್ನು ಪತ್ತೆ ಹಚ್ಚಿ ಕಡತಕ್ಕೆ ಸೆರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಖೇಮ್ಕಾ ಅವರು ಡಿಎಲ್‌ಎಫ್ ಮತ್ತು ವಾದ್ರಾ ಕಂಪೆನಿಯ ಭೂಪರಿವರ್ತನೆ ಆದೇಶ­ವನ್ನು ರದ್ದುಪಡಿಸಿದ್ದರು. ನಂತರ ಆಗಿನ ಮುಖ್ಯಮಂತ್ರಿ ಹೂಡಾ ಅವರು ರಚಿ­ಸಿದ್ದ ಮೂವರು ಸದಸ್ಯರ ಸಮಿತಿಯು ವಾದ್ರಾ ಮತ್ತು ಡಿಎಲ್ಎಫ್ ಕಂಪೆನಿ­ಯದು ಏನೂ ತಪ್ಪಿಲ್ಲ ಎಂದು ವರದಿ ನೀಡಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆ ಕಡತ­ದಿಂದ ನಾಪತ್ತೆಯಾ­ಗಿದೆ. ಇದೊಂದು ಗಂಭೀರ ಲೋಪ­ವಾಗಿದ್ದು, ಎಫ್‌ಐಆರ್ ದಾಖಲಿಸ­ಬೇಕು ಎಂದು ಖೇಮ್ಕಾ ಅವರು ಮುಖ್ಯ ಕಾರ್ಯ­ದರ್ಶಿ ಅವರಿಗೆ ಪತ್ರ ಬರೆದು ಒತ್ತಾಯಸಿದ್ದಾರೆ.

‘ಗಂಭೀರ ವಿಚಾರ’
ನವದೆಹಲಿ (ಪಿಟಿಐ):
ವಾದ್ರಾ ಭೂ ಹಗರಣದ ಕಡತದಿಂದ ಎರಡು ಪುಟ­ಗಳು ನಾಪತ್ತೆಯಾಗಿ­ರು­ವುದು ಬಹಳ ಗಂಭೀರ ವಿಚಾರ ಎಂದು ಕೇಂದ್ರ ಸಚಿವ ರಾವ್ ಇಂದ್ರಜಿತ್ ಸಿಂಗ್ ಹೇಳಿದ್ದಾರೆ.

ಸಿಂಗ್ ಅವರು ಹರಿಯಾಣದ ಮಾಜಿ ಕಾಂಗ್ರೆಸ್ ಮುಖಂಡರು. ಕಳೆದ ಚುನಾ­ವಣೆ ಸಂದರ್ಭದಲ್ಲಿ ಬಿಜೆಪಿ ಸೇರಿ ಈಗ ಮೋದಿ ಸಂಪುಟದಲ್ಲಿ ಯೋಜನಾ ಸಚಿವ­ರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT