ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಣಸಿ: ಜೈನರಿಗೂ ಶ್ರದ್ಧಾ ಕೇಂದ್ರ

Last Updated 30 ಜುಲೈ 2014, 19:30 IST
ಅಕ್ಷರ ಗಾತ್ರ

ಸ್ಟೀಫನ್ ಸ್ಟ್ರಾಮ್  ಅವರು ‘ವಾರಾಣಸಿ ಸ್ವಚ್ಛತೆ ಮೋದಿ ಸಾಮ­ರ್ಥ್ಯಕ್ಕೆ ಸವಾಲು’ (ಪ್ರಜಾವಾಣಿಯ ಸಂಗತ, ಜುಲೈ ೨೯) ಲೇಖನದಲ್ಲಿ ಅಲ್ಲಿನ ಐತಿಹಾಸಿಕ ಮಹತ್ವವನ್ನು ತಿಳಿಸುತ್ತ, ‘ಜ್ಞಾನೋದ­ಯದ ಬಳಿಕ ಗೌತಮ ಬುದ್ಧ ತನ್ನ ಮೊದಲ ಬೋಧನೆ ನೀಡಿದ್ದು ಇಲ್ಲಿಯೇ’ ಎಂದಿರುವರು.

ಇನ್ನೂ ಮಹತ್ವದ ಅಂಶವೆಂದರೆ ಜೈನ­ಧರ್ಮದ ಬಹುಜನಪ್ರಿಯ ೨೩ನೇ ತೀರ್ಥಂಕರ­ನಾದ ಭಗವಾನ್ ಪಾರ್ಶ್ವನಾಥನು ಗೌತಮ ಬುದ್ಧನ ಹಿರಿಯ ಸಮಕಾಲೀನನಾಗಿದ್ದ ಭಗವಾನ್ ಮಹಾವೀರನಿಗಿಂತ ಅಂದರೆ ಸುಮಾರು ೨೫೦ ವರ್ಷಗಳ ಮೊದಲು, ಕ್ರಿ.ಪೂ. ೮ನೇ ಶತಮಾನ­ದಲ್ಲಿ ವಾರಾಣಸಿಯಲ್ಲಿ ಜನಿಸಿದನು. ಜೈನ ಸಂಪ್ರದಾಯದ ಪ್ರಕಾರ ತೀರ್ಥಂಕರ ಪಾರ್ಶ್ವನಾಥನ ಪಂಚ­ಕಲ್ಯಾಣ­ಗಳಲ್ಲಿ ಒಂದಾದ ಜನ್ಮ ಕಲ್ಯಾಣವು ಇಲ್ಲಿಯೇ ನೆರವೇರಿತು. ಆದಕಾರಣ ವಾರಾಣಸಿಯು ಬೌದ್ಧ ಮತ್ತು ಹಿಂದೂಗಳಿಗಲ್ಲದೆ ಜೈನ ಧರ್ಮೀಯರಿಗೂ ಶ್ರದ್ಧಾ ಕೇಂದ್ರವಾಗಿದೆ.

-–ಡಾ.ಎಚ್.ಎ.ಪಾರ್ಶ್ವನಾಥ್
  ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT