ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಾಂಗ ವ್ಯವಹಾರ ಖಾತೆ: ಸುಷ್ಮಾ ಮೊದಲ ಸಂಪುಟ ಸಚಿವೆ

Last Updated 28 ಮೇ 2014, 11:01 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವೆಯಾಗಿ ಸುಷ್ಮಾ ಸ್ವರಾಜ್‌ ಮಂಗಳವಾರ ಅಧಿಕಾರ ಸ್ವೀಕರಿಸಿದ್ದು, ಈ ಸ್ಥಾನಕ್ಕೆ ಏರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆದರೆ, ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಕೆಲ ಕಾಲ ವಿದೇಶಾಂಗ ವ್ಯವಹಾರ ಖಾತೆಯನ್ನು ತಮ್ಮ ಅಧೀನದಲ್ಲಿ ಇಟ್ಟುಕೊಂಡಿದ್ದರು. ಕಾಕತಾಳೀಯ ಎಂಬಂತೆ ಮತ್ತೊಬ್ಬ ಮಹಿಳೆ ಸುಜಾತಾ ಸಿಂಗ್‌ ವಿದೇಶಾಂಗ ವ್ಯವಹಾರ ಸಚಿವಾಲಯದ ಕಾರ್ಯದರ್ಶಿಯಾಗಿದ್ದಾರೆ.

ಹಲವು ದಾಖಲೆ: 1977ರಲ್ಲಿ ದೇವಿ­ಲಾಲ್‌ ನೇತೃತ್ವದ  ಹರಿಯಾಣ ಸರ್ಕಾ­ರದಲ್ಲಿ ಸುಷ್ಮಾ 25ನೇ  ವಯಸ್ಸಿನ­ಲ್ಲಿಯೇ  ಅತ್ಯಂತ ಕಿರಿಯ ವಯಸ್ಸಿನ ಸಂಪುಟ ದರ್ಜೆಯ ಸಚಿವೆ ಎಂಬ ಹೆಗ್ಗ­ಳಿ­ಕೆಗೆ ಪಾತ್ರರಾಗಿದ್ದರು. ಇಂಥ ಹಲ­ವಾರು ಹೆಗ್ಗಳಿಕೆಯನ್ನು ಅವರು ಹೊಂದಿದ್ದಾರೆ.

ದೆಹಲಿ ಮೊದಲ ಮಹಿಳಾ ಮುಖ್ಯ­ಮಂತ್ರಿ ಹಾಗೂ ರಾಜಕೀಯ ಪಕ್ಷ­ವೊಂದರ ಮೊದಲ ಮಹಿಳಾ ವಕ್ತಾರೆ ಎಂಬ ದಾಖಲೆಯೂ ಅವರ ಹೆಸರಿನಲ್ಲಿದೆ. ವಿದೇ­ಶಾಂಗ ವ್ಯವಹಾರಗಳ ಖಾತೆ ಜತೆ ಸಾಗರೋತ್ತರ ವ್ಯವಹಾರಗಳ ಖಾತೆಯ ಹೆಚ್ಚು­ವರಿ ಹೊಣೆಯೂ ಸುಷ್ಮಾ  ಹೆಗಲೇರಿದೆ.  ನೆರೆಯ ಚೀನಾ, ಪಾಕಿಸ್ತಾನ­ಗಳ ಜತೆ­ಗಿನ ಭಾರತದ ಬಾಂಧವ್ಯ ವೃದ್ಧಿ ಸೇರಿ ಹಲವಾರು ಸವಾಲುಗಳು ಅವರ ಮುಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT